ಬಡವ ರಾಸ್ಕಲ್, 2021ರ ಸೂಪರ್ ಹಿಟ್ ಸಿನಿಮಾ. ರಾಜ್ಯಾದ್ಯಂತ ಥಿಯೇಟರುಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರೋ ಬಡವ ರಾಸ್ಕಲ್ ವಿದೇಶ ಪ್ರವಾಸ ಹೊರಟಿದ್ದಾನೆ. ಚಿತ್ರವೀಗ ವಿದೇಶಗಳಲ್ಲಿಯೂ ರಿಲೀಸ್ ಆಗೋಕೆ ಸಿದ್ಧವಾಗಿದೆ. ಮೊದಲ ಹಂತವಾಗಿ ಜರ್ಮನಿಯಲ್ಲಿ..
ಬಡವ ರಾಸ್ಕಲ್‍ಗೆ ಕನ್ನಡಿಗರು ಹೆಚ್ಚಿರುವ ಅಮೆರಿಕ, ದುಬೈ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಥಿಯೇಟರುಗಳಲ್ಲಿ ಯಶಸ್ವೀ 25ನೇ ದಿನದತ್ತ ದಾಪುಗಾಲಿಟ್ಟಿದೆ. ಡಾಲಿ ಧನಂಜಯ್ ಫುಲ್ ಹ್ಯಾಪಿ. ಯಾಕಂದ್ರೆ ಚಿತ್ರಕ್ಕೆ ಅವರು ಹೀರೋ ಅಷ್ಟೇ ಅಲ್ಲವಲ್ಲ.. ನಿರ್ಮಾಪಕರೂ ಹೌದು. ಸಿನಿಮಾವನ್ನು ಹೆಚ್ಚು ಹೆಚ್ಚು ಜನ ನೋಡಿದಷ್ಟೂ ಡಾಲಿ ಜನಪ್ರಿಯತೆಯ ಜೊತೆ, ಕಲೆಕ್ಷನ್ನೂ ಹೆಚ್ಚಲಿದೆ.