Print 
dhananjay, badava rascal, amrutha,

User Rating: 5 / 5

Star activeStar activeStar activeStar activeStar active
 
ಬಡವ ರಾಸ್ಕಲ್ ಕಲೆಕ್ಷನ್ ಎಷ್ಟು?
Badava Rascal Movie Image

ವರ್ಷದ ಕೊನೆಯಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿನಿಮಾ ಬಡವ ರಾಸ್ಕಲ್. ಧನಂಜಯ್ ನಿರ್ಮಾಣದ ಮೊದಲ ಸಿನಿಮಾ ಥಿಯೇಟರುಗಳಲ್ಲಿ ಈಗಲೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಹಾಗಾದರೆ ಚಿತ್ರದ ಕಲೆಕ್ಷನ್ ಎಷ್ಟು? 15 ಕೋಟಿ ದಾಟಿದೆಯಾ?

ಸಿನಿಮಾ ಗೆದ್ದಿದೆ. ಲಾಭವೂ ಬಂದಿದೆ. ಸೇಫ್ ಆಗಿದ್ದೇವೆ. ಆದರೆ 15 ಕೋಟಿ ಲಾಭ ಅನ್ನೋದೆಲ್ಲ ಸುಳ್ಳು. ಅಷ್ಟೆಲ್ಲ ಲಾಭ ಬಂದಿದ್ದರೆ ಹೆಲಿಕಾಪ್ಟರಿನಲ್ಲಿ ಬಂದು ಥ್ಯಾಂಕ್ಸ್ ಹೇಳುತ್ತಿದೆ. ವಿತರಕರ ಜೊತೆ ಮಾತನಾಡಿ ಎಲ್ಲ ವಿವರ ಪಡೆದುಕೊಂಡು ಮಾಹಿತಿ ನೀಡುತ್ತೇನೆ ಎಂದಿದ್ದಾರೆ ಧನಂಜಯ್.

ಧನಂಜಯ್, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ತಾರಾ, ನಾಗಭೂಷಣ್ ಮೊದಲಾದವರು ನಟಿಸಿದ್ದಾರೆ. ಚಿತ್ರ ಯಶಸ್ವಿಯಾಗಿರುವ ಬೆನ್ನಲ್ಲೆ ವೀಕೆಂಡ್ ಕಫ್ರ್ಯೂ ಬಗ್ಗೆ ಮರುಪರಿಶೀಲಿಸಿ ಎಂದು ಧನಂಜಯ್ ಮನವಿ ಮಾಡಿದ್ದಾರೆ.