ಜೋಗಿ ಪ್ರೇಮ್ ನಿರ್ದೇಶನದ, ರಕ್ಷಿತಾ ತಮ್ಮ ರಾಣಾ ಹೀರೋ ಆಗಿ ಎಂಟ್ರಿ ಕೊಡುತ್ತಿರೋ ಏಕ್ ಲವ್ ಯಾ ಚಿತ್ರ ಈಗಾಗಲೇ ಭರ್ಜರಿ ಸದ್ದು ಮಾಡ್ತಿದೆ. ರಾಣಾ ರಚಿತಾ ಲಿಪ್ ಲಾಕ್, ಬಿಡುಗಡೆಯಾಗಿರೋ ಒಂದಕ್ಕಿಂತ ಒಂದು ಸೂಪರ್ ಹಿಟ್ ಹಾಡುಗಳು ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟು ಹಾಕಿವೆ. ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ ಚಿತ್ರ ಜನವರಿ ಕೊನೆಯಲ್ಲಿ ತೆರೆಗೆ ಬರಬೇಕಿತ್ತು.
ಚಿತ್ರದ ರಿಲೀಸ್ ಮುಂದೆ ಹಾಕಿದ್ದಾರೆ ಪ್ರೇಮ್. ಏಕ್ ಲವ್ ಯಾ ಜನವರಿ 21ಕ್ಕೆ ರಿಲೀಸ್ ಆಗುತ್ತಿಲ್ಲ. ಮತ್ತೆ ಯಾವಾಗ? ಹೇಳುತ್ತೇನೆ. ಖಂಡಿತಾ ಒಂದೊಳ್ಳೆ ಡೇಟ್ ಫಿಕ್ಸ್ ಮಾಡ್ತೇನೆ ಎಂದಿದ್ದಾರೆ ಪ್ರೇಮ್.
ರಾಣಾ ಎದುರು ರೀಷ್ಮಾ ನಾಣಯ್ಯ ಹೀರೋಯಿನ್ ಆಗಿದ್ದಾರೆ. ರಚಿತಾ ರಾಮ್ ಅಷ್ಟೇ ಪ್ರಮುಖ ಪಾತ್ರದಲ್ಲಿದ್ದಾರೆ.