ಮಂಗಳಾದೇವಿ ಅಂದ್ರೆ ನೀನೇನ್ ದೊಡ್ಡ ಡಾನಾ?
ನೀವ್ಯಾರು? ನೀವ್ಯಾರು ಅಂಥಾ ಹೇಳಿ ಮೊದ್ಲು?
ನಾನ್ಯಾರಾದ್ರೂ ಆಗಲಿ. ಬರ್ಲಾ ಮಂಗಳೂರಿಗೆ..
ನೀವ್ಯಾರು ಅಂತಾ ಹೇಳಿ ಮೊದ್ಲು..
ನಾನು ಭಜರಂಗಿ..
ಅರೇ.. ಶಿವಣ್ಣ.. ಓಂ ಮಾಡಿದ್ದು ನೀವು ಮೊದ್ಲು... ಹಾಗಾಗಿ ನೀವೇ ಡಾನ್. ನಾವು ನಿಮ್ಮನ್ನ ನೋಡಿ ಸಿನಿಮಾ ಮಾಡ್ದೋರು. ಹಾಗಾಗಿ ನೀವೇ ಡಾನ್..
ಇದು ಶಿವರಾಜ್ ಕುಮಾರ್ ಮತ್ತು ಗರಡು ಗಮನ ವೃಷಭ ವಾಹನ ಹೀರೋ ರಾಜ್ ಬಿ.ಶೆಟ್ಟಿ ಮಧ್ಯೆ ನಡೆದ ಫೋನ್ ಸಂಭಾಷಣೆ. ಥಿಯೇಟರಲ್ಲಿ ಭರ್ಜರಿ ಸೌಂಡು ಮಾಡಿದ ಚಿತ್ರವೀಗ ಒಟಿಟಿಗೆ ಬರುತ್ತಿದೆ. ಒಟಿಟಿಯಲ್ಲೂ ಪ್ರಚಾರಕ್ಕಿಳಿದಿರೋ ಚಿತ್ರತಂಡ ವಿಭಿನ್ನವಾಗಿಯೇ ಚಿತ್ರವನ್ನು ಪ್ರಮೋಟ್ ಮಾಡುತ್ತಿದೆ. ಅಫ್‍ಕೋರ್ಸ್.. ಒಟಿಟಿಯಲ್ಲಿ ಸೂಪರ್ ಡ್ಯೂಪರ್ ಹಿಟ್ ಎನಿಸಿಕೊಂಡಿರುವ ಭಜರಂಗಿಯನ್ನೂ ಪ್ರಚಾರಕ್ಕೆ ಬಳಸಿಕೊಂಡಿದೆ.