ವರ್ಷದ ಕೊನೆಯ ಬ್ಲಾಕ್ ಬಸ್ಟರ್ ಬಡವ ರಾಸ್ಕಲ್. ಸಿನಿಮಾ ಚೆನ್ನಾಗಿದ್ದರೆ ಜನ ಥಿಯೇಟರಿಗೆ ಬಂದೇ ಬರುತ್ತಾರೆ ಎನ್ನುವುದನ್ನು ಸಾಬೀತು ಮಾಡಿ ಗೆದ್ದ ಸಿನಿಮಾ. ಡಾಲಿ ಧನಂಜಯ್ ನಿರ್ಮಾಣದ ಮೊದಲ ಸಿನಿಮಾ. ಚಿತ್ರತಂಡದ ವಿಜಯಯಾತ್ರೆ ಮುಂದುವರೆಯುತ್ತಿದೆ.
ರಾಮನಗರ, ಚೆನ್ನಪಟ್ಟಣ, ಅರಸೀಕೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಇಳಕಲ್, ಗದಗ, ಹುಬ್ಬಳ್ಳಿ.. ಹೀಗೆ ಎಲ್ಲೆಡೆ ಇಡೀ ಚಿತ್ರತಂಡ ವಿಜಯಯಾತ್ರೆ ಮಾಡಿದೆ. ಹೋದ ಕಡೆಯಲ್ಲೆಲ್ಲ ಅಪ್ಪುಗೆಯ ಅಭಿಮಾನ.
ಒಂದು ಮೂಲದ ಪ್ರಕಾರ ಚಿತ್ರದ ಕಲೆಕ್ಷನ್ 15 ಕೋಟಿಯನ್ನೂ ದಾಟಿದೆ. ಚಿತ್ರದ ಹೀರೋ ಧನಂಜಯ್, ಹೀರೋಯಿನ್ ಅಮೃತಾ ಅಯ್ಯಂಗಾರ್, ಡೈರೆಕ್ಟರ್ ಶಂಕರ್ ಗುರು ಎಲ್ಲರಿಗೂ ಚಿತ್ರರಂಗದ ಸೀನಿಯರ್ಸ್ ಕಂಗ್ರಾಟ್ಸ್ ಹೇಳುತ್ತಿದ್ದಾರೆ.