ಇದೇ ಜನವರಿಯಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ ಏಕ್ ಲವ್ ಯಾ. ಜೋಗಿ ಪ್ರೇಮ್ ಡೈರೆಕ್ಷನ್ನ ಚಿತ್ರದ ಮೂಲಕ ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಹೀರೋ ಆಗಿ ಎಂಟ್ರಿ ಕೊಡಬೇಕಿರುವ ಸಿನಿಮಾ ಏಕ್ ಲವ್ ಯಾ. ಈಗಾಗಲೇ ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿದ್ದವು. ಒಂದು ಲೆವೆಲ್ಲಿಗೆ ಪ್ರಚಾರವನ್ನೂ ಮುಗಿಸಿತ್ತು ಪ್ರೇಮ್ ಟೀಂ. ಜೊತೆಗೆ ರಚಿತಾ ರಾಮ್-ರಾಣಾ ಕಿಸ್ಸಿಂಗ್ ಬೇರೆಯದೇ ಸೆನ್ಸೇಷನ್ ಸೃಷ್ಟಿಸಿತ್ತು.
ಇಷ್ಟೆಲ್ಲ ಆಗಿ ಇವತ್ತು ಅರ್ಥಾತ್ ಜನವರಿ 4ಕ್ಕೆ ರಿಲೀಸ್ ಆಗಬೇಕಿದ್ದ ಏಕ್ ಲವ್ ಯಾ ಟ್ರೇಲರ್ ಬಿಡುಗಡೆ ಮುಂದಕ್ಕೆ ಹೋಗಿದೆ. ನೀಡಿರುವುದು ತಾಂತ್ರಿಕ ಕಾರಣಗಳೇ ಆದರೂ, ಕಾರಣ ಬೇರೆಯದೇ ಇದೆ ಎನ್ನಲಾಗಿದೆ. ಅಕಸ್ಮಾತ್ ಸರ್ಕಾರ 50:50 ರೂಲ್ಸ್ ಜಾರಿಗೆ ತಂದರೆ ಏನು ಮಾಡುವುದು ಎಂಬ ಭಯ ಚಿತ್ರ ತಂಡದ್ದು. ಟ್ರೇಲರ್ ರಿಲೀಸ್ ಮಾಡದೆ ಪ್ರಚಾರ ಮಾಡುವುದೂ ಕಷ್ಟ. ಹೀಗಾಗಿ ಚಿತ್ರದ ರಿಲೀಸ್ ಕೂಡಾ ಮುಂದಕ್ಕೆ ಹೋದರೆ ಆಶ್ಚರ್ಯವಿಲ್ಲ.
ಆದರೆ ಸದ್ಯಕ್ಕಂತೂ ಜೋಗಿ ಪ್ರೇಮ್ ಜನವರಿ 21ಕ್ಕೆ ಸಿನಿಮಾ ರಿಲೀಸ್ ಮಾಡುವುದು ಪಕ್ಕಾ ಎಂದಿದ್ದಾರೆ. ಚಿತ್ರದ ಇನ್ನೊಂದು ಹಾಡನ್ನು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.