ಮಂಕಾಥ, ಮನ್ನಾಡು ನಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ತಮಿಳು ಸಿನಿಮಾ ಡೈರೆಕ್ಟರ್ ವೆಂಕಟ್ ಪ್ರಭು ಸುದೀಪ್ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಒಂದೆಡೆ ವಿಕ್ರಾಂತ್ ರೋಣ ತಲೆಬಿಸಿಯಲ್ಲಿರೋ ಸುದೀಪ್ ಅದು ಮುಗಿಯುತ್ತಿದ್ದಂತೆ ವೆಂಕಟ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕೆಲವು ತಿಂಗಳ ಹಿಂದೆ ವೆಂಕಟ್ ಪ್ರಭು ಸುದೀಪ್ ಅವರಿಗೆ ಕಥೆ ಹೇಳಿದ್ದರು. ಕಥೆಯೂ ಓಕೆಯಾಗಿತ್ತು.
ಒನ್ಸ್ ಎಗೇಯ್ನ್.. ಈ ಚಿತ್ರವೂ ಹಲವು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಚಿತ್ರ ಯಾವಾಗ ಸೆಟ್ಟೇರಲಿದೆ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.