2021ರ ಸೂಪರ್ ಹಿಟ್ ಚಿತ್ರ ಗರುಡ ಗಮನ ವೃಷಭ ವಾಹನ ಈಗ ಮನೆ ಮನೆಗೂ ಬರಲಿದೆ. ನ.19ರಂದು ರಿಲೀಸ್ ಆಗಿದ್ದ ಜಿಜಿವಿವಿ ಬಾಕ್ಸಾಫೀಸ್ನಲ್ಲಿ ಅದ್ಭುತ ಕಲೆಕ್ಷನ್ ಮಾಡಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರಿಬ್ಬರ ಮೆಚ್ಚುಗೆಯನ್ನೂ ಪಡೆದಿದ್ದ ಗರುಡ ಗಮನ ವೃಷಭ ವಾಹನ ಓಟಿಟಿಯಲ್ಲಿ ಬರಲಿದೆ. ಸಂಕ್ರಾಂತಿಗೆ.
ರಾಜ್ ಬಿ.ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿದ್ದರು. ಜೀ5ನಲ್ಲಿ ರಿಲೀಸ್ ಆಗುತ್ತಿರುವ ಗರುಡ ಗಮನ ವೃಷಭ ವಾಹನ ಜನವರಿ 15ರಂದು ಓಟಿಟಿಯಲ್ಲಿ ಪ್ರಸಾರವಾಗಲಿದೆ.