ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿದ್ದ ಆರ್‍ಆರ್‍ಆರ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಎಲ್ಲವೂ ಸಿದ್ಧವಾಗಿತ್ತು. ಪ್ರಚಾರವೂ ಚೆನ್ನಾಗಿಯೇ ನಡೆದಿತ್ತು. ಪ್ರೇಕ್ಷಕರ ನಿರೀಕ್ಷೆಯೂ ಮುಗಿಲೆತ್ತರದಲ್ಲಿತ್ತು. ಸೂಪರ್ ಹಿಟ್ ಆಗುವ ಎಲ್ಲ ನಿರೀಕ್ಷೆಗಳೂ ಇದ್ದವು. ಇದೆಲ್ಲದರ ನಡುವೆಯೇ ಜನವರಿ 14ರಂದು ರಿಲೀಸ್ ಆಗಬೇಕಿದ್ದ ಆರ್‍ಆರ್‍ಆರ್ ರಿಲೀಸ್ ಡೇಟ್‍ನ್ನು ಮುಂದೆ ಹಾಕಿದೆ ಚಿತ್ರತಂಡ. ಕಾರಣ ಕೊರೊನಾ ಭಯ.
ಸದ್ಯಕ್ಕೆ ಕೊರೊನಾ ಇಲ್ಲ. ಆದರೆ ಒಮಿಕ್ರಾನ್, ಡೆಮಿಕ್ರಾನ್, ಫ್ಲೋರೈನ್.. ಹೀಗೆ ಕೊರೊನಾದ ಚಿತ್ರವಿಚಿತ್ರ ಹೆಸರುಗಳು ಮತ್ತೆ ಕೇಳಿ ಬರುತ್ತಿವೆ. ಹೀಗಾಗಿಯೇ ಅಕಸ್ಮಾತ್ ಮತ್ತೆ ಲಾಕ್ ಡೌನ್ ಆದರೆ ಅನ್ನೋ ಭಯ, ಪ್ರೇಕ್ಷಕರ ಭರ್ತಿಗೆ ಶೇ.50ರ ನಿರ್ಬಂಧ ವಿಧಿಸಿದರೆ ಅನ್ನೋ ಭಯ.. ಈ ನಿರ್ಧಾರಕ್ಕೆ ಕಾರಣವಾಗಿದೆ.
ರಾಜಮೌಳಿ ನಿರ್ದೇಶನದ ಜ್ಯೂ.ಎನ್‍ಟಿಆರ್, ರಾಮ್ ಚರಣ್ ತೇಜ, ಅಜಯ್ ದೇವಗನ್, ಅಲಿಯಾ ಭಟ್.. ಮೊದಲಾದವರು ನಟಿಸಿರೋ ಚಿತ್ರ ಆರ್‍ಆರ್‍ಆರ್. ಬಹುಶಃ ಏಪ್ರಿಲ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.