ಬಡವ ರಾಸ್ಕಲ್ ಈ ವರ್ಷದ ಕೊನೆಯ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿದೆ. ಚಿತ್ರ 2ನೇ ವಾರಕ್ಕೆ ಕಾಲಿಟ್ಟಿದ್ದು, ಈಗಲೂ ತುಂಬಿದ ಪ್ರದರ್ಶನಗಳ ಶೋ ನಡೆಯುತ್ತಿವೆ. ಬಡವ ರಾಸ್ಕಲ್ ಡಾಲಿ ಪಿಕ್ಚರ್ಸ್ನ ಮೊದಲ ಸಿನಿಮಾ. ಒಟಿಟಿಯಲ್ಲಿ ರತ್ನನ್ ಪ್ರಪಂಚ ಚಿತ್ರದ ಮೂಲಕ ಗೆದ್ದಿದ್ದ ಡಾಲಿ ಧನಂಜಯ್, ಥಿಯೇಟರುಗಳಲ್ಲಿ ಬಡವ ರಾಸ್ಕಲ್ ಮೂಲಕ ಗೆದ್ದಿದ್ದಾರೆ. ಹೀರೋ ಆಗಿ.. ಪ್ರೊಡ್ಯೂಸರ್ ಆಗಿ.. ಎರಡರಲ್ಲೂ ಗೆದ್ದಿದ್ದಾರೆ.
ಇದರ ನಡುವೆ ಇದನ್ನು ಡಾಲಿ ವಾರ ಅನ್ನೋಕೂ ಕಾರಣ ಇದೆ. ಬಡವ ರಾಸ್ಕಲ್ ರಿಲೀಸ್ ಆಗುವ ಒಂದು ವಾರ ಮುಂಚೆ ತೆಲುಗಿನಲ್ಲಿ ಪುಷ್ಪ ರಿಲೀಸ್ ಆಗಿತ್ತು. ಅದೂ ಗೆದ್ದಾಗಿದೆ. ಅಲ್ಲಿಯೂ ಡಾಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಒಟ್ಟಿನಲ್ಲಿ 2021 ಡಾಲಿ ಪಾಲಿಗೆ ಅದೃಷ್ಟದ ವರ್ಷವಾಗಿದೆ.
ಬಡವ ರಾಸ್ಕಲ್ ಗೆಲ್ಲುವುದರೊಂದಿಗೆ ನಿರ್ದೇಶಕರಾಗಿ ಶಂಕರ್ ಗುರು, ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಸೇರಿದಂತೆ ಧನಂಜಯ್ ಅವರ ಗೆಳೆಯರ ಬಳಗವೂ ಗೆದ್ದಿದೆ.