` ಚಿತ್ರಲೋಕ ಕೆ.ಎಂ ವೀರೇಶ್`ಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚಿತ್ರಲೋಕ ಕೆ.ಎಂ ವೀರೇಶ್`ಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ
Chitraloka Editor KM Veeresh

ಪ್ರೆಸ್ ಕ್ಲಬ್ ಕೊಡಮಾಡುವ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಚಿತ್ರಲೋಕ ಡಾಟ್ ಕಾಮ್ ಸಂಪಾದಕರಾದ ಕೆ.ಎಂ.ವೀರೇಶ್ ಅವರಿಗೆ ಸಂದಿದೆ. ಮಾಧ್ಯಮ ಲೋಕದಲ್ಲಿ ಚಿತ್ರಲೋಕ ವೀರೇಶ್ ಎಂದೇ ಪರಿಚಿತರಾಗಿರುವ ವೀರೇಶ್ ಅವರದ್ದು ಹೆಚ್ಚೂ ಕಡಿಮೆ 3 ದಶಕಗಳ ಪತ್ರಿಕೋದ್ಯಮದ ಅನುಭವವಿದೆ. ಈಗ ಸಂಪೂರ್ಣವಾಗಿ ಸಿನಿಮಾ ಪತ್ರಕರ್ತರಾಗಿರುವ ವೀರೇಶ್ ವೃತ್ತಿಪರ ಫೋಟೋಗ್ರಾಫರ್ ಕೂಡಾ ಹೌದು. ಇವರ ಫೋಟೋ ಎಕ್ಸಿಬಿಷನ್ ಏಷ್ಯಾ ಮತ್ತು ಭಾರತದ ಮಟ್ಟದಲ್ಲಿ ಲಿಮ್ಕಾ ದಾಖಲೆ ಸೇರಿವೆ. ಕ್ರೈಂ ವರದಿಗಾರಿಕೆಯಲ್ಲೂ ಹೆಸರು ಮಾಡಿರುವ, ಕ್ರೀಡಾ ಪತ್ರಿಕೋದ್ಯಮದಲ್ಲಿಯೂ ಸಾಧನೆ ಮಾಡಿರುವ ವೀರೇಶ್, ಈಗ  ಸಿನಿಮಾ ಪತ್ರಕರ್ತರಾಗಿ ಮುಂದುವರೆದಿದ್ದಾರೆ.

ಉದಯವಾಣಿ, ರೂಪತಾರಾ, ಹಾಯ್ ಬೆಂಗಳೂರು, ಕನ್ನಡ ಪ್ರಭ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಪತ್ರಕರ್ತರಾಗಿದ್ದ ವೀರೇಶ್ ಈಗ ಚಿತ್ರಲೋಕ ಡಾಟ್ ಕಾಂನ ಸಂಪಾದಕರು. ಭಾರತದಲ್ಲಿ ಗೂಗಲ್ ಕಣ್ಣುಬಿಡುವ ಮೊದಲೇ ಚಿತ್ರಲೋಕ ವೆಬ್‍ಸೈಟ್ ಆರಂಭಿಸಿದ ಹಿರಿಮೆ ಇವರದ್ದು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿರುವ ದೇಶದ ಏಕೈಕ ವೆಬ್‍ಸೈಟ್ ಪೋರ್ಟಲ್ ಚಿತ್ರಲೋಕ ಡಾಟ್ ಕಾಮ್. ಹೀಗೆ ಸಾಧನೆಯ ಇತಿಹಾಸವಿರುವ ಪತ್ರಿಕೋದ್ಯಮದಲ್ಲಿ ಹತ್ತು ಹಲವು ವಿಶೇಷ ಸಾಧನೆ ಮಾಡಿರುವ ವೀರೇಶ್ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಘೋಷಿಸಿ ಗೌರವಿಸಿದೆ.

ವೀರೇಶ್ ಅವರೊಂದಿಗೆ ಸುವರ್ಣ ನ್ಯೂಸ್ ಕನ್ನಡ ಪ್ರಭದ ಹಿರಿಯ ಪತ್ರಕರ್ತ ಪ್ರಶಾಂತ್ ನಾಥು, ಭಾಸ್ಕರ್ ರಾವ್ ಎಂ.ಕೆ., ಪದ್ಮರಾಜ ದಂಡವತಿ, ರಂಜಾನ್ ದರ್ಗಾ, ಕೆಸ್ತೂರು ಗುಂಡಪ್ಪ ವಾಸುಕಿ, ಡಾ.ಜಗದೀಶ್ ಕೊಪ್ಪ ಎನ್., ಬಾಲಸುಬ್ರಹ್ಮಣ್ಯಂ ಕೆ.ಆರ್., ಬಿ.ವಿ.ಶಿವಶಂಕರ್, ಯತೀಶ್ ಕುಮಾರ್ ಜಿ.ಡಿ., ಸುದರ್ಶನ್ ಚೆನ್ನಂಗಿಹಳ್ಳಿ, ದೊಡ್ಡ ಬೊಮ್ಮಯ್ಯ, ವಾಸಂತಿ ಹರಿಪ್ರಕಾಶ್, ಪ್ರಕಾಶ್ ಬೆಳವಾಡಿ, ಎಸ್.ಎಚ್.ಮಾರುತಿ ಹಾಗೂ ಭಾನುಪ್ರಕಾಶ್ ಕೂಡಾ ಈ ವರ್ಷದ ಪ್ರೆಸ್ ಕ್ಲಬ್ ವಾರ್ಷಿಕ ಸಾಧನೆ ಪ್ರಶಸ್ತಿ ಪುರಸ್ಕøತರು.

ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನೀಡಲಾಗುತ್ತಿದೆ. ಕೊರೊನಾ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದ ಸಚಿವ ಡಾ.ಕೆ.ಸುಧಾಕರ್ ಅವರನ್ನೂ ಈ ವೇಳೆ ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ. ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ ಅವರೂ ಕೂಡಾ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಬೆಂಗಳೂರಿನ ಅರಮನೆ  ಮೈದಾನದ ಗಾಯತ್ರಿ ವಿಹಾರದಲ್ಲಿ ಪ್ರಶಸ್ತಿ ಪುರಸ್ಕøತರಿಗೆ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ವೇಳೆ 2020ನೇ ಸಾಲಿನ ವರ್ಷದ ವ್ಯಕ್ತಿ ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್‍ಜಿ, ಚಿತ್ರ ನಟ ಸುದೀಪ್, ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಸೇರಿದಂತೆ 2020ನೇ ಸಾಲಿನ ಪ್ರೆಸ್‍ಕ್ಲಬ್ ಪ್ರಶಸ್ತಿ ಪುರಸ್ಕøತರನ್ನೂ ಸನ್ಮಾನಿಸಲಾಗುತ್ತಿದೆ.

ಚಿತ್ರಲೋಕ ವೀರೇಶ್ ಅವರಿಗೆ ಶುಭಾಶಯಗಳು.