ಡಿ.31ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾ ಅರ್ಜುನ್ ಗೌಡ. ಪ್ರಜ್ವಲ್ ದೇವರಾಜ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಪ್ರಧಾನ ಪಾತ್ರದಲ್ಲಿರೋ ಅರ್ಜುನ್ ಗೌಡ ಚಿತ್ರಕ್ಕೆ ಲಕ್ಕಿ ಶಂಕರ್ ಡೈರೆಕ್ಟರ್. ರಾಮು ನಿರ್ಮಾಣದ ಕೊನೆಯ ಚಿತ್ರ ಕಮರ್ಷಿಯಲ್ ಸಿನಿಮಾ ಎನ್ನುವುದರಲ್ಲಿ ಯಾವ ಡೌಟೂ ಇಲ್ಲ. ಇಂತಹ ಚಿತ್ರದಲ್ಲಿ ಅರ್ಜುನ್ ಗೌಡನ ಪಾತ್ರ ಹೇಗಿದೆ?
ಅರ್ಜುನ್ ಗೌಡ ಅಹಂಕಾರದ ಸ್ವಭಾವದವನು. ತಾಯಿಯೊಂದಿಗೆ ಸದಾ ಜಗಳವಾಡುವ ಹುಡುಗ. ಸಮಾಜದ ದುಷ್ಟಶಕ್ತಿಗಳ ಜೊತೆ ಹೊಡೆದಾಡುವ, ಒಳ್ಳೆಯವರ ವೇಷದಲ್ಲಿ ದೇಶದೊಳಗೆ ಬದುಕುತ್ತಿರುವ ವಿದ್ರೋಹಿಗಳನ್ನು ಬೆತ್ತಲು ಮಾಡುವ ಪಾತ್ರ. ಇದರ ಮಧ್ಯೆ ಒಂದು ಲವ್ ಸ್ಟೋರಿ ಇದೆ ಎನ್ನುತ್ತಾರೆ ಪ್ರಜ್ವಲ್ ದೇವರಾಜ್.
ಚಿತ್ರದಲ್ಲಿ ಪ್ರಜ್ವಲ್ ಮೂರು ಶೇಡ್ಗಳಲ್ಲಿ ಕಾಣಿಸಿದ್ದಾರಂತೆ. ಲಕ್ಕಿ ಶಂಕರ್ ಚಿತ್ರದ ಕಥೆಯನ್ನು ಚೆನ್ನಾಗಿ ಹೇಳಿದ್ದಾರೆ ಎಂದು ಖುಷಿಯಾಗಿದ್ದಾರೆ ಪ್ರಜ್ವಲ್.