ನಟಿ ರಚಿತಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ರಚಿತಾ ರಾಮ್ ಅತ್ಯಂತ ಬ್ಯುಸಿ ಹೀರೋಯಿನ್. ಇದೇ ತಿಂಗಳು ಡಿ.31ಕ್ಕೆ ಅವರ ಅಭಿನಯದ ಲವ್ ಯೂ ರಚ್ಚು ರಿಲೀಸ್ ಆಗುತ್ತಿದೆ. ಜನವರಿಯಲ್ಲಿ ಏಕ್ ಲವ್ ಯಾ ರಿಲೀಸ್ ಇದೆ. ಹಿಂದಿನ ತಿಂಗಳು 100 ಮೂವಿ ರಿಲೀಸ್ ಆಗಿತ್ತು. ಮತ್ತೊಂದೆಡೆ ಚಂದನ್ ಶೆಟ್ಟಿ ಜೊತೆಗೆ ಲಕಲಕ ಲ್ಯಾಂಬೋರ್ಗಿನಿ ಶೂಟಿಂಗ್ ಆಗಿದ್ದು, ಆ ಹಾಡು ಕೂಡಾ ಈಗ ರಿಲೀಸ್ ಹಂತದಲ್ಲಿದೆ.
ಒಂದೆಡೆ ನಿರಂತರವಾಗಿ ಲವ್ ಯೂ ರಚ್ಚು ಮತ್ತು ಏಕ್ ಲವ್ ಯಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ರಚಿತಾ ರಾಮ್, ನಿರಂತರ ಶೂಟಿಂಗ್ ಮತ್ತು ಪ್ರಚಾರದ ಒತ್ತಡದಲ್ಲಿ ಸುಸ್ತಾಗಿದ್ದರು. ಶೀತಜ್ವರಕ್ಕೆ ತುತ್ತಾಗಿದ್ದ ರಚಿತಾ ರಾಮ್, ಶಿವಮೊಗ್ಗಕ್ಕೆ ಹೋಗಿ ಬಂದ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಆರೋಗ್ಯ ಸುಧಾರಿಸಿದ್ದು, ರಚಿತಾ ಅವರಿಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ರಚಿತಾ ಸದ್ಯಕ್ಕೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.