ರಾಮು. ಕೋಟಿ ರಾಮು ಎಂದೇ ಖ್ಯಾತರಾದ ನಿರ್ಮಾಪಕ. ತಮ್ಮ ಸಿನಿಮಾಗಳಲ್ಲಿ ಅದ್ಧೂರಿತನವನ್ನು ತರಲೆಂದೇ ಕೋಟಿ ಕೋಟಿ ಸುರಿಯುತ್ತಿದ್ದ ರಾಮು ನಿರ್ಮಾಪಕರಾಗಿದ್ದು ಗೋಲಿಬಾರ್ ಚಿತ್ರದ ಮೂಲಕ.
ಗೋಲಿಬಾರ್ ಚಿತ್ರಕ್ಕೆ ಹೀರೋ ದೇವರಾಜ್. ಅದೂವರೆಗೆ ವಿಲನ್ ಪಾತ್ರಗಳಲ್ಲಿಯೇ ಹೆಚ್ಚು ಮಿಂಚುತ್ತಿದ್ದ ದೇವರಾಜ್ ಅವರಿಗೆ ಹೀರೋಯಿಸಂ ಪಟ್ಟ ಕೊಟ್ಟಿದ್ದೂ ಗೋಲಿಬಾರ್ ಚಿತ್ರವೇ. ಆ ಚಿತ್ರದ ನಂತರವೇ ದೇವರಾಜ್ ಕಂಪ್ಲೀಟ್ ಹೀರೋ ಆಗಿದ್ದು. ಅದಾದ ನಂತರವೂ ರಾಮು ಮತ್ತು ದೇವರಾಜ್ ಸಿನಿ ಜರ್ನಿ ಅದ್ಭುತವಾಗಿ ಮುಂದುವರೆಯಿತು. ಗೋಲಿಬಾರ್ ನಂತರ ಲಾಕಪ್ ಡೆತ್, ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಎಲ್ಲವೂ ಸೂಪರ್ ಹಿಟ್ ಚಿತ್ರಗಳೇ.
ಇನ್ನೂ ಒಂದು ವಿಶೇಷವಿದೆ. ರಾಮು ದೇವರಾಜ್ ಅವರಿಗೆ 3 ಸಿನಿಮಾ ನಿರ್ಮಿಸಿದ್ದರು. ಇತ್ತ ಪ್ರಜ್ವಲ್ ಅವರಿಗೂ ಮೂರು ಚಿತ್ರಗಳು. ಗುಲಾಮ ಮತ್ತು ಸಾಗರ್ ನಂತರ ಈಗ ಅರ್ಜುನ್ ಗೌಡ.
ಈಗ ರಾಮು ಇಲ್ಲ. ಆದರೆ ರಾಮು ನಿರ್ಮಾಣದ ಕೊನೆಯ ಚಿತ್ರ ಅರ್ಜುನ್ ಗೌಡ. ವಿಶೇಷವೆಂದರೆ ಈ ಚಿತ್ರದ ಹೀರೋ ಪ್ರಜ್ವಲ್ ದೇವರಾಜ್. ದೇವರಾಜ್ ಮಗ. ಅರ್ಜುನ್ ಗೌಡ ಚಿತ್ರದ ಟ್ರೇಲರ್, ಹಾಡುಗಳು ಗಮನ ಸೆಳೆಯುತ್ತಿವೆ. ಅರ್ಜುನ್ ಗೌಡ ಇದೇ ಡಿ.31ಕ್ಕೆ ರಿಲೀಸ್ ಆಗುತ್ತಿದೆ.