ಬಡವ ರಾಸ್ಕಲ್ ಗೆದ್ದಾಗಿದೆ. ಇನ್ನೇನಿದ್ದರೂ ಲಾಭದ ಲೆಕ್ಕ. ಇದರ ನಡುವೆ ಚಿತ್ರತಂಡ ವಿಜಯ ಯಾತ್ರೆ ನಡೆಸುತ್ತಿದೆ. ಇದೆಲ್ಲದರ ಮಧ್ಯೆ ಎಲ್ಲರ ಗಮನ ಸೆಳೆಯುತ್ತಿರೋದು ಧನಂಜಯ್ ಮಾತುಗಳು.
ಚಿತ್ರದ ಯಶಸ್ಸಿನ ಕ್ರೆಡಿಟ್ ಹೋಗಬೇಕಿರುವುದು ನಿರ್ದೇಶಕರಿಗೆ. ಅವರು ತುಂಬಾ ಚೆನ್ನಾಗಿ ಕಥೆ ಮಾಡಿದ್ದರು. ಹಾಗೆ ಮಾಡಿಕೊಂಡ ಕಥೆಯನ್ನು ಅಷ್ಟೇ ಅದ್ಬುತವಾಗಿ ತೆರೆಯ ಮೇಲೂ ತಂದರು. ಹೀಗಾಗಿ ಚಿತ್ರ ಎಲ್ಲರಿಗೂ ಕನೆಕ್ಟ್ ಆಯಿತು. ಇಷ್ಟವಾಯಿತು. ಪ್ರತಿಯೊಂದು ಪಾತ್ರಗಳೂ ಹೈಲೈಟ್ ಆದವು ಎಂದಿದ್ದಾರೆ ಧನಂಜಯ್. ಅಂದಹಾಗೆ ಧನಂಜಯ್ ಈ ಚಿತ್ರಕ್ಕೆ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಚಿತ್ರದ ಗೆಲುವಿನ ಸಿಂಹಪಾಲನ್ನು ನಿರ್ದೇಶಕರಿಗೆ ನೀಡುತ್ತಿರುವ ಧನಂಜಯ್ ಅವರ ಮಾತು ಎಲ್ಲೆಡೆ ಮೆಚ್ಚುಗೆ ಗಳಿಸುತ್ತಿದೆ. ಇದರ ನಡುವೆ ಜನರೊಂದಿಗೆ ಧನಂಜಯ್ ಬೆರೆಯುತ್ತಿರುವುದೂ ವಿಶೇಷವಾಗಿ ಸೆಳೆಯುತ್ತಿದೆ.
ನಾವೆಲ್ಲ ಅಣ್ಣಾವ್ರನ್ನು ಅನುಸರಿಸಿಕೊಂಡು ಬಂದವರು. ಜೊತೆಗೆ ಶಿವಣ್ಣ, ಅಪ್ಪು ಅವರನ್ನೇ ಹೆಚ್ಚು ನೋಡಿದ್ದು. ಅವರು ತಮ್ಮ ಎಲ್ಲ ಖ್ಯಾತಿ, ಈಗೋಗಳನ್ನು ಬದಿಗಿಟ್ಟು ಸಿಂಪಲ್ ಆಗಿ ಜನರೊಂದಿಗೆ ಬೆರೆಯುತ್ತಾರೆ. ಬೆರೆಯುತ್ತಿದ್ದರು. ಹೀಗಾಗಿ ನಾನೂ ಅದನ್ನೇ ಮಾಡುತ್ತಿದ್ದೇನೆ ಅಷ್ಟೆ ಎಂದಿದ್ದಾರೆ ಧನಂಜಯ್.