ಅರ್ಜುನ್ ಗೌಡ. ಇದೇ ವಾರ ರಿಲೀಸ್ ಆಗುತ್ತಿರೋ ಸಿನಿಮಾ. ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್ ನಟಿಸಿರೋ ಈ ಚಿತ್ರ ರಾಮು ಅವರ ಕೊನೆಯ ಕನಸು. ಪತಿ ರಾಮು ಅವರ ಆ ಕನಸು ನನಸು ಮಾಡೋಕೆ ಹೊರಟಿರುವುದು ನಟಿ ಮಾಲಾಶ್ರೀ. ಆ ಕನಸಿಗೆ ಹಲವರು ಶಕ್ತಿ ತುಂಬುತ್ತಿದ್ದಾರೆ. ಕಿಚ್ಚ ಸುದೀಪ್ ಸೇರಿದಂತೆ..
ಅರ್ಜುನ್ ಗೌಡ ಚಿತ್ರದ ಬಗ್ಗೆ ಬಹಳ ಕೇಳಿದ್ದೆ. ಅದು ರೀಮೇಕ್ ಎಂದೇ ಹಲವರು ಹೇಳಿದ್ದರು. ಆದರೆ ಇದು ರೀಮೇಕ್ ಅಲ್ಲ, ಸ್ಟ್ರೈಟ್ ಸಬ್ಜೆಕ್ಟ್ ಸಿನಿಮಾ ಎಂದು ಆಮೇಲೆ ಗೊತ್ತಾಯ್ತು. ಅರ್ಜುನ್ ಗೌಡ ಚಿತ್ರವನ್ನು ನಿರ್ದೇಶಕ ಲಕ್ಕಿ ಶಂಕರ್ ತುಂಬಾ ಚೆನ್ನಾಗಿ ಮಾಡಿದ್ದಾರೆ. ಧರ್ಮವಿಶ್ ಅವರ ಮ್ಯೂಸಿಕ್ಕೂ ಚೆನ್ನಾಗಿದೆ. ನನಗೆ ಜಯಣ್ಣ ಕೇಳು ಭೋಗಣ್ಣ ಹಾಡು ಇಷ್ಟವಾಯ್ತು. ರಾಮು ಅವರ ಈ ಕನಸನ್ನು ಗೆಲ್ಲಿಸೋಣ ಎಂದಿದ್ದಾರೆ ಸುದೀಪ್.
ಪ್ರಜ್ವಲ್, ಪ್ರಿಯಾಂಕಾ ತಿಮ್ಮೇಶ್, ಸ್ಪರ್ಶ ರೇಖಾ.. ಮೊದಲಾದವರು ನಟಿಸಿರೋ ಚಿತ್ರ ಡಿ.31ಕ್ಕೆ ರಿಲೀಸ್ ಆಗುತ್ತಿದೆ.