ನಟಿ ಆದಿತಿ ಪ್ರಭುದೇವ ಮದುವೆಯಾಗುತ್ತಿದ್ದಾರೆ. ಈಗಾಗಲೇ ನಿಶ್ಚಿತಾರ್ಥವೂ ಆಗಿ ಹೋಗಿದೆ. ಹುಡುಗನ ಹೆಸರು ಯಶಸ್. ರೈತ. ಕಾಫಿ ಪ್ಲಾಂಟರ್. ಚಿಕ್ಕಮಗಳೂರಿನ ಈ ಹುಡುಗನ ಜೊತೆ ಲವ್ ಆಗಿದೆ. ಕೆಲವೇ ದಿನಗಳ ಹಿಂದೆ ನಿಶ್ಚಿತಾರ್ಥವೂ ಆಗಿ ಹೋಗಿದೆ. ಮದುವೆ ಈಗಲ್ಲ. ಅದನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮದಿಂದ ಮಾಡಿಕೊಳ್ತೇವೆ ಎಂದಿದ್ದಾರೆ ಆದಿತಿ.
ಕಿರುತೆರೆಯಲ್ಲಿ ಗುಂಡ್ಯಾನ್ ಮದುವೆ ಮತ್ತು ನಾಗಕನ್ನಿಕೆಯಾಗಿ ಪರಿಚಿತರಾದ ಆದಿತಿ ನಂತರ ಧೈರ್ಯಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಬಜಾರ್, ಸಿಂಗ, ಬ್ರಹ್ಮಚಾರಿ, ಆನ.. ಚಿತ್ರಗಳು ರಿಲೀಸ್ ಆಗಿವೆ. ರಿಲೀಸ್ ಆಗಬೇಕಿರುವ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ಒಂಭತ್ತನೇ ದಿಕ್ಕು, ತೋತಾಪುರಿ ಭಾಗ 1 & 2, ಗಜಾನನ & ಗ್ಯಾಂಗ್, ಓಲ್ಡ್ ಮಾಂಕ್, ತ್ರಿಬಲ್ ರೈಡಿಂಗ್, ಅಂದೊಂದಿತ್ತು ಕಾಲ, ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ, ಮಾಫಿಯಾ.. ಹೀಗೆ ಹಲವು ಚಿತ್ರಗಳಿವೆ.