ಬಡವ ರಾಸ್ಕಲ್ ರಿಲೀಸ್ ದಿನವೇ ಸೂಪರ್ ಹಿಟ್ ಅನ್ನೋದು ಗೊತ್ತಾಗಿತ್ತು. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರು ಹೊರ ಬರುವಾಗ ಕೊಟ್ಟ ರಿಯಾಕ್ಷನ್ಸ್ ಹಾಗಿತ್ತು. ಕ್ರಿಯೇಟಿವ್ ಪ್ರೊಮೋಷನ್ ಮೂಲಕ ಚಿತ್ರವನ್ನು ಜನರಿಗೆ ಪರಿಚಯಿಸಿದ್ದವರು ಬಡವ ರಾಸ್ಕಲ್ಸ್. ಆದರೆ, ಚಿತ್ರ ನೋಡಿ ಬಂದವರು ಚಿತ್ರದ ಬಗ್ಗೆ ಸ್ವತಃ ಪ್ರಚಾರಕ್ಕಿಳಿದರು. ಡಾಲಿ ಗೆದ್ದಿದ್ದು ಅಲ್ಲಿ. ಹೀಗಾಗಿ ಚಿತ್ರತಂಡ ವಿಜಯ ಯಾತ್ರೆ ಮಾಡಿದೆ.
ಬೆಂಗಳೂರು, ಚನ್ನಪಟ್ಟಣ, ಹಾಸನ, ಅರಸೀಕೆರೆ, ಮಳವಳ್ಳಿ, ಮಂಡ್ಯ, ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ.. ಹೀಗೆ ಸದ್ಯಕ್ಕೊಂದು ಪುಟ್ಟ ವಿಜಯಯಾತ್ರೆ ಮಾಡಿಕೊಂಡು ಬಂದಿದೆ ಬಡವ ರಾಸ್ಕಲ್ ಟೀಂ. ಅಫ್‍ಕೋರ್ಸ್.. ಇದು ಒಂದು ದಿನದ ಯಾತ್ರೆಯಷ್ಟೇ.. ಯಾತ್ರೆ ಇನ್ನೂ ಹಲವು ಕಡೆ ಹೋಗೋದು ಬಾಕಿ ಇದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಡಾಲಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದ್ದಾರೆ.
ಅಂದಹಾಗೆ ಈ ಸಿನಿಮಾ ಗುಜ್ಜಲ್ ಪ್ರೊಡಕ್ಷನ್ಸ್ ಜೊತೆ ಜಂಟಿ ನಿರ್ಮಾಣದಲ್ಲಿ ಶುರುವಾಗಿತ್ತು. ನಂತರ ಗುಜ್ಜಲ್ ಪ್ರೊಡಕ್ಷನ್ಸ್ ಹಿಂದೆ ಸರಿದಿತ್ತು. ಧನಂಜಯ್ ಇಡೀ ಚಿತ್ರವನ್ನು ಹೆಗಲಿಗೇರಿಸಿಕೊಂಡಿದ್ದರು. ಈಗ ಸಿಂಗಲ್ ಆಗಿಯೇ ಗೆದ್ದಿದ್ದಾರೆ.