` ರೈಡರ್`ಗೆ ಪೈರಸಿ ಕಾಟ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರೈಡರ್`ಗೆ ಪೈರಸಿ ಕಾಟ
Raider Movie Image

ರೈಡರ್. ಕ್ರಿಸ್‍ಮಸ್ ಮುನ್ನಾ ದಿನ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿರೋ ಚಿತ್ರ. ನಿಖಿಲ್ ಕುಮಾರಸ್ವಾಮಿ ಅಭಿನಯಕ್ಕೆ ಪ್ರೇಕ್ಷಕರು ಮಾರು ಹೋಗಿದ್ದಾರೆ. ಆಲ್‍ಮೋಸ್ಟ್ 2 ವರ್ಷಗಳ ನಂತರ ನಿಖಿಲ್ ತೆರೆಯ ಮೇಲೆ ನೋಡಲು ಸಿಕ್ಕಿರೋದು. ಹೀಗಾಗಿ ಅಭಿಮಾನಿಗಳಿಗೂ ಒಂಥರಾ ಥ್ರಿಲ್. ಆ ಥ್ರಿಲ್‍ಗೆ ತಕ್ಕಂತೆಯೇ ಸಿನಿಮಾ ಬಂದಿದೆ. ನಿಖಿಲ್ ಈ ಗೆಲುವಿನ ಖುಷಿಯಲ್ಲಿ ರಾಮನಗರ, ಚನ್ನಪಟ್ಟಣ, ಮಂಡ್ಯಗಳಲ್ಲಿ ಥಿಯೇಟರುಗಳಿಗೆ ಭೇಟಿ ಕೊಟ್ಟಿದ್ದಾರೆ. ಇದರ ನಡುವೆಯೇ ಅವರಿಗೆ ಪೈರಸಿ ಕಾಟವೂ ಕಾಡುತ್ತಿದೆ.

ತಮಿಳ್ ರಾಕರ್ಸ್‍ನವರು ರೈಡರ್ ಚಿತ್ರವನ್ನು ಪೈರಸಿ ಮಾಡಿ ಇಂಟರ್‍ನೆಟ್ಟಿಗೆ ಬಿಟ್ಟಿದ್ದಾರೆ. ಪೈರಸಿ ಕಾಪಿ ಡಿಲೀಟ್ ಮಾಡಿದ್ದಷ್ಟೂ ಹೊಸ ಹೊಸ ಕಾಪಿ ರಿಲೀಸ್ ಆಗುತ್ತಿವೆ. ಇದರ ವಿರುದ್ಧ ಚಿತ್ರತಂಡ ಸೈಬರ್ ಕ್ರೈಂಗೆ ದೂರನ್ನೂ ಕೊಟ್ಟಿದೆ.

ದಯವಿಟ್ಟು ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ. ಕನ್ನಡ ಚಿತ್ರರಂಗವನ್ನು ಉಳಿಸಿ ಅನ್ನೋದು ನಿಖಿಲ್ ಕುಮಾರಸ್ವಾಮಿ ಮನವಿ. ಸುನಿಲ್ ಗೌಡ ಮತ್ತು ಲಹರಿ ಪ್ರೊಡಕ್ಷನ್ಸ್ ಕಾಂಬಿನೇಷನ್‍ನಲ್ಲಿ ಮೂಡಿ ಬಂದ ಚಿತ್ರ ರೈಡರ್. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರದಲ್ಲಿ ನಿಖಿಲ್‍ಗೆ ಕಾಶ್ಮೀರ ಪರದೇಸಿ ನಾಯಕಿ.