ಇತ್ತೀಚೆಗೆ ಪೇಜಾವರ ಶ್ರೀಗಳ ಬಗ್ಗೆ ಆಡಿದ್ದ ಮಾತಿನಿಂದಾಗಿ ವಿವಾದಕ್ಕೊಳಗಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ, ಆಗ ಕ್ಷಮೆ ಕೇಳಿದ್ದರು. ಈಗ ಮತ್ತೊಮ್ಮೆ ವಿವಾದವನ್ನು ಕೆಣಕಿದ್ದಾರೆ. ನಾನು ಹೆದರಿಲ್ಲ. ಹೆದರುವುದೂ ಇಲ್ಲ. ನಾನು ಭಯಸ್ತನಲ್ಲ. ಮಾಗಡಿ ರೋಡ್‍ನಲ್ಲಿ ದೊಡ್ಡ ಪೋಲಿ ಆಟ ಆಡಿದ ಚರಿತ್ರೆ ಇದೆ ಎನ್ನುವ ಮೂಲಕ ವಿವಾದಕ್ಕೆ ಧುಮುಕಿದ್ದಾರೆ ಹಂಸಲೇಖ.
ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ ಆ ವಿವಾದದ ವೇಳೆ ತಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದು ಹಾರೈಸಿದರು ಹಂಸಲೇಖ.