` ನಮಗೆ ನಾವೇ ನಷ್ಟ ಮಾಡ್ಕೊಂಡು ಬಂದ್ ಮಾಡಬೇಕಾ? : ಚಿತ್ರರಂಗ ಪ್ರಶ್ನೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಮಗೆ ನಾವೇ ನಷ್ಟ ಮಾಡ್ಕೊಂಡು ಬಂದ್ ಮಾಡಬೇಕಾ? : ಚಿತ್ರರಂಗ ಪ್ರಶ್ನೆ
ನಮಗೆ ನಾವೇ ನಷ್ಟ ಮಾಡ್ಕೊಂಡು ಬಂದ್ ಮಾಡಬೇಕಾ? : ಚಿತ್ರರಂಗ ಪ್ರಶ್ನೆ

ಡಿ.31ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್`ರೆ ಕರೆ ಕೊಟ್ಟಿವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಎಂಇಎಸ್ ಗೂಂಡಾಗಿರಿ, ಕನ್ನಡ ಧ್ವಜಕ್ಕೆ ಆದ ಅವಮಾನ, ರಾಯಣ್ಣ, ಬಸವಣ್ಣ ಪ್ರತಿಮೆಗಳಿಗೆ ಮಸಿ ಬಳಿದದ್ದನ್ನು ಖಂಡಿಸಿ ಹೋರಾಟಕ್ಕಿಳಿದಿವೆ. ಚಿತ್ರರಂಗದವರೂ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಆದರೆ ಇದು ನೈತಿಕ ಬೆಂಬಲಕ್ಕೆ ಸೀಮಿತವಾಗಿದೆ. ಚಿತ್ರಮಂದಿರದ ಯಾವ ಚಟುವಟಿಕೆಗಳೂ ಬಂದ್ ಆಗಲ್ಲ. ಯಾಕೆ ಎನ್ನುವುದಕ್ಕೆ ಅವರದ್ದೇ ಒಂದು ವಾದವೂ ಇದೆ.

ಫಿಲಂ ಚೇಂಬರ್ : ಕನ್ನಡಕ್ಕೆ ಕನ್ನಡ ಪರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತೆ. ಡಿ.31ರಂದು ಚಟುವಟಿಕೆಗಳು ನಿಂತರೆ ಕಷ್ಟವಾಗುತ್ತದೆ. ಹೀಗಾಗಿ ಸಾಂಕೇತಿಕ ಬೆಂಬಲ ಮಾತ್ರ ನೀಡುತ್ತಿದ್ದೇವೆ. ಉಳಿದಂತೆ ಚಿತ್ರ ಪ್ರದರ್ಶನ, ಚಿತ್ರೀಕರಣ ಸೇರಿದಂತೆ ಎಲ್ಲ ಚಟುವಟಿಕೆಗಳೂ ನಡೆಯುತ್ತವೆ.

ಶಿವಣ್ಣ ; ಕೋವಿಡ್`ನಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿದ್ದೇವೆ. ಡಿ.31ರಂದು 3 ಚಿತ್ರಗಳು ರಿಲೀಸ್ ಆಗುತ್ತಿವೆ. ಯಾವುದೇ ಚಿತ್ರಕ್ಕೂ ನಷ್ಟ ಮಾಡೋದು ಒಳ್ಳೆಯದಲ್ಲ.

ಯಶ್ : ಕನ್ನಡ ಸಂಘಟನೆಗಳ ಹೋರಾಟಕ್ಕೆ ಬೆಂಬಲ ಇದೆ. ಆದರೆ ನಮಗೆ ನಾವೇ ನಷ್ಟ ಮಾಡಿಕೊಂಡು ಪ್ರತಿಭಟಿಸಬೇಕಾ? ಇದು ಸರಿಯಲ್ಲ. ಸರ್ಕಾರ ಕನ್ನಡಕ್ಕೆ ಅವಮಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಿ. ಅವರ ಜೊತೆ ನಾವು ಇದ್ದೇವೆ.