ಬಡವ ರಾಸ್ಕಲ್ ಜನಮನ ಗೆದ್ದಿದೆ. ಡಾಲಿ ಧನಂಜಯ್ ನಿರ್ಮಾಪಕರಾಗಿ ಮತ್ತು ಹೀರೋ ಆಗಿ ಎರಡೂ ವಿಭಾಗಗಳಲ್ಲಿ ಗೆದ್ದಿದ್ದಾರೆ. ಜೊತೆಯಲ್ಲೇ ಗೆಲುವಿನ ಯಾತ್ರೆಯನ್ನೂ ಶುರು ಮಾಡಿದ್ದಾರೆ. ಚಿತ್ರದಲ್ಲಿ ಬರುವ ಸಣ್ಣ ಸಣ್ಣ ಸನ್ನಿವೇಶಗಳು ಹೃದಯ ಮುಟ್ಟುವಂತೆ ಚಿತ್ರಿಸುವುದರಲ್ಲಿ ನಿರ್ದೇಶಕ ಶಂಕರ್ ಗುರು ಗೆದ್ದಿದ್ದಾರೆ. ಧನಂಜಯ್, ಅಮೃತಾ ಅಯ್ಯಂಗಾರ್, ಶಂಕರ್ ಗುರು, ವಾಸುಕಿ ವೈಭವ್ ಸೇರಿದಂತೆ ಇಡೀ ಬಡವ ರಾಸ್ಕಲ್ ಟೀಂ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ಅಭಿಮಾನಿಗಳ ಜೊತೆ ಸಂಭ್ರಮ ಪಡುತ್ತಿದೆ.
ಈ ಗೆಲುವು ನಮ್ಮ ನಿರ್ದೇಶಕರದ್ದು. ಅವರು ಒಳ್ಳೆಯ ಕಥೆ ಮಾಡಿಟ್ಟುಕೊಂಡು, ಸನ್ನಿವೇಶಗಳನ್ನು ಬರೆದು ಒಳ್ಳೆ ಚಿತ್ರ ಕೊಟ್ಟಿದ್ದಾರೆ. ಇದು ನಿರ್ದೇಶಕರ ಸಿನಿಮಾ ಎಂದಿದ್ದಾರೆ ಧನಂಜಯ್. ಇತ್ತೀಚೆಗೆ ಗೆಲುವಿನ ಕ್ರೆಡಿಟ್‍ನ್ನು ನಿರ್ದೇಶಕರೂ ಪಡೆಯುತ್ತಿರುವ ಅಪರೂಪದ ಪ್ರಸಂಗವಿದು.