ಅಲ್ಲಾ ನವೀನ. ಈ ಹಾಡಿಗೆ ಸಾಹಿತ್ಯ ಬರೆದಿರುವುದು ನಾಗಾರ್ಜುನ ಶರ್ಮಾ. ಸಾಹಿತ್ಯವನ್ನಷ್ಟೇ ಅಲ್ಲ, ಹಾಡಿನ ನಿರ್ದೇಶಕರೂ ಅವರೇ. ನಟಿಸಿರುವುದು ರಾಜ್ ಬಿ.ಶೆಟ್ಟಿ, ಸ್ಫೂರ್ತಿ ಉಡಿಮನೆ ಮತ್ತು ಅಥರ್ವ. ಈ ಹಾಡನ್ನು ರಿಲೀಸ್ ಮಾಡಿ ಶುಭ ಕೊರಿದ್ದು ದುನಿಯಾ ವಿಜಯ್.
ಹಾಡು ಕೇಳೋಕೆ ಮತ್ತು ನೋಡೋಕೆ ತುಂಬಾ ಚೆನ್ನಾಗಿದೆ. ನಮ್ಮ ಸಲಗ ಚಿತ್ರಕ್ಕೆ ಕೆಲಸ ಮಾಡುವಾಗ ನಾಗಾರ್ಜುನ್ ಅವರನ್ನು ನೋಡಿದ್ದೇನೆ. ಮಳೆಯೇ ಮಳೆಯೇ ಮತ್ತು ಸಲಗ ಟೈಟಲ್ ಟ್ರ್ಯಾಕ್ ಬರೆದಿದದ್ದು ಇವರೇ. ಯಾವಾಗ ಏನೇ ಬದಲಾವಣೆ ಕೇಳಿದರೂ ತಕ್ಷಣ ಎಲ್ಲರೂ ಒಪ್ಪುವಂತೆಯೇ ಮಾಡಿಕೊಡುತ್ತಿದ್ದರು. ಇವರು ಬೇಗ ನಿರ್ದೇಶಕರಾಗಬೇಕು ಎಂದು ಹಾರೈಸಿದ್ದು ದುನಿಯಾ ವಿಜಯ್.
ಹಾಡು ತಮಿಳಿನಲ್ಲೂ ರಿಲೀಸ್ ಆಗುತ್ತಿರೋದು ವಿಶೇಷ.