ಬಡವ ರಾಸ್ಕಲ್ ಆಟೋ ಡ್ರೈವರ್ ಲವ್ ಸ್ಟೋರಿಯೂ ಹೌದು. ಡಾಲಿ ಧನಂಜಯ್ ಜೊತೆ ಅಮೃತಾ ಅಯ್ಯಂಗಾರ್ ನಾಯಕಿ. ನಾಯಕ ಹಾಳಾಗಿರೋದೇ ಅವನ ಸ್ನೇಹಿತರಿಂದ ಅಂತ ನಂಬಿರೋ ಅವನ ಗರ್ಲ್‍ಫ್ರೆಂಡ್ ಪಾತ್ರ. ಹೀರೋ ಆಟೋ ಡ್ರೈವರ್. ಒಂದೊಂದು ಕಥೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಕನೆಕ್ಟ್ ಆಗುತ್ತೆ. ಚಿತ್ರದ ಕಥೆ ಕೇಳಿದಾಗ ಅಮೃತಾಗೆ ನೆನಪಾಗಿದ್ದು ಅವರ ಮಾವಂದಿರು.
ನನ್ನ ಅಮ್ಮನಿಗೆ ಇಬ್ಬರು ತಮ್ಮಂದಿರು. ಇಬ್ಬರೂ ಆಟೋ ಓಡಿಸ್ತಾ ಇದ್ರು. ನಮ್ಮದು ಮಿಡ್ಲ್ ಕ್ಲಾಸ್ ಫ್ಯಾಮಿಲಿ. ನನಗೆ ನಿದ್ರೆ ಬರದೆ ಅಳೋಕೆ ಶುರು ಮಾಡಿದ್ರೆ ಮಾವಂದಿರಿಬ್ರೂ ಆಟೋದಲ್ಲಿ ಕೂರಿಸಿಕೊಂಡು ರೌಂಡ್ ಹಾಕ್ತಿದ್ರು. ಎರಡು ರೌಂಡ್ ಮುಗಿಯೋದ್ರಲ್ಲಿ ನಿದ್ದೆ ಹೋಗಿಬಿಡ್ತಿದ್ದೆ. ಅವರಿಬ್ಬರೂ ಈಗ ಇಲ್ಲ. ಚಿತ್ರದ ಕಥೆ ಕೇಳಿದಾಗ ಅವರಿಬ್ಬರೂ ನೆನಪಾದರು ಎಂದು ಭಾವುಕರಾಗುತ್ತಾರೆ ಅಮೃತಾ ಅಯ್ಯಂಗಾರ್.
ಡಾಲಿ ಧನಂಜಯ್ ಹೀರೋ ಮತ್ತು ನಿರ್ಮಾಪಕ ಎರಡೂ ಆಗಿರೋ ಬಡವ ರಾಸ್ಕಲ್ ಸಖತ್ತಾಗಿಯೇ ಸೌಂಡ್ ಮಾಡ್ತಿದೆ. ಹಾಡುಗಳು ವ್ಹಾವ್ ಎನ್ನಿಸಿವೆ. ಡೈಲಾಗುಗಳು ಪಡ್ಡೆಗಳ ಹೃದಯ ತಟ್ಟಿವೆ. ಶಂಕರ್ ಗುರು ಕಥೆ ಮತ್ತು ನಿರ್ದೇಶನದಲ್ಲಿ ಚೆನ್ನಾಗಿಯೇ ವರ್ಕೌಟ್ ಮಾಡಿದ್ದಾರೆ.