ಕೋಟಿ ರಾಮು ನಿರ್ಮಾಣದ 39ನೇ ಚಿತ್ರ ಅರ್ಜುನ್ ಗೌಡ. ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿದ್ದ ರಾಮು ಕೊರೊನಾಗೆ ಬಲಿಯಾದರು. ಅವರು ನಿರ್ಮಿಸಿದ್ದ ಕೊನೆಯ ಸಿನಿಮಾ ಅರ್ಜುನ್ ಗೌಡ ಚಿತ್ರ ಈಗ ರಿಲೀಸ್ ಆಗುತ್ತಿದೆ. ಡಿಸೆಂಬರ್ 31ರಂದು ಬಿಡುಗಡೆಯಾಗುತ್ತಿರೊ ಚಿತ್ರಕ್ಕೆ ಹೀರೋ ಪ್ರಜ್ವಲ್ ದೇವರಾಜ್.
ಲಕ್ಕಿ ಶಂಕರ್ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಇದು ಮಾಸ್ ಮನರಂಜನೆ ಇರೋ ಸಿನಿಮಾ. ರಾಮು ಅವರ ಕನಸಿನ ಜೊತೆ ಕೊನೆಯವರೆಗೂ ನಾನಿರುತ್ತೇನೆ ಎಂದಿರೋ ಪ್ರಜ್ವಲ್ ದೇವರಾಜ್ ಚಿತ್ರದ ಪ್ರಚಾರಕ್ಕೆ ನೊಗ ಕೊಟ್ಟಿದ್ದಾರೆ.