ಒಂದು ಸಿನಿಮಾವನ್ನು ಜನರಿಗೆ ತಲುಪಿಸೋಕೆ ಯಾವ್ಯಾವ ರೀತಿ ಕ್ರಿಯೇಟಿವ್ ಆಗಿ ಯೋಚಿಸಬೇಕು ಅನ್ನೋಕೆ ಬಡವ ರಾಸ್ಕಲ್`ಗಿಂತ ಉದಾಹರಣೆ ಬೇಕಿಲ್ಲ. ಬಡವ ರಾಸ್ಕಲ್ ಚಿತ್ರದ ಪ್ರಚಾರ ಶುರುವಾಗಿದ್ದೇ ಫುಟ್‍ಪಾತುಗಳಿಂದ. ಇದೂವರೆಗೆ ಯಾರೂ ಟಚ್ ಕೂಡಾ ಮಾಡದೇ ಇದ್ದ ತಳ್ಳುವ ಗಾಡಿ, ಫುಟ್‍ಪಾತ್ ಹೋಟೆಲು, ಎಳನೀರು ಅಂಗಡಿ, ದಿನಸಿ ಅಂಗಡಿ.. ಹೀಗೆ ಬಡವ ಮತ್ತು ಮಧ್ಯಮ ವರ್ಗದವರು ಹೆಚ್ಚು ಹೆಚ್ಚು ಹೋಗುವ ಜಾಗಗಳಲ್ಲಿ ಚಿತ್ರದ ಪ್ರಚಾರ ಮಾಡಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಬಡವ ರಾಸ್ಕಲ್ಸ್.
ಇಂತಹ ಅಂಗಡಿಗಳಿಗೆ ಪ್ರತಿನಿತ್ಯ ಹೋಗಿ ಬರುವ ಅಜ್ಜಿ ಬಡವ ರಾಸ್ಕಲ್ ಮತ್ತು ರಿಲೀಸ್ ಡೇಟ್ ಬರೆಯೋದನ್ನೇ ಕಲಿತು ಬಿಟ್ಟ ಕಥೆಯನ್ನು ಸ್ವಲ್ಪ ತಮಾಷೆಯಾಗಿ ಮಾಡಿ ವಿಡಿಯೋ ಬಿಟ್ಟಿದ್ದಾರೆ ಬಡವ ರಾಸ್ಕಲ್ಸ್. ಅ ಎಂಬುದೇ ಬರೆಯುವುದಕ್ಕೆ ಆಗದ ಅಜ್ಜಿ ಬಡವ ರಾಸ್ಕಲ್ ಬರೆದಿದ್ದು ಹೇಗೆ ಅನ್ನೋದನ್ನ ತಿಳ್ಕೋಬೇಕು ಅಂದ್ರೆ ಡಿ.24ಕ್ಕೆ ಥಿಯೇಟರಿಗೆ ಹೋಗಿ ನೋಡಬೇಕು.
ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ತಾರಾ, ರಂಗಾಯಣ ರಘು ನಟಿಸಿರೋ ಚಿತ್ರಕ್ಕೆ ಶಂಕರ್ ಗುರು ಡೈರೆಕ್ಟರ್. ಡಾಲಿ ಬ್ಯಾನರ್‍ನ ಮೊದ ಚಿತ್ರವಿದು. ಆರಂಭದಿಂದಲೂ ಕ್ರಿಯೇಟಿವ್ ಆಗಿಯೇ ಪ್ರೇಕ್ಷಕರನ್ನು ರೀಚ್ ಆಗುತ್ತಿರೋ ಚಿತ್ರತಂಡ ಸಖತ್ತಾಗಿಯೇ ಸಿನಿಮಾ ಪ್ರಮೋಷನ್ ಮಾಡುತ್ತಿದೆ.