ನಿಖಿಲ್ ಕುಮಾರಸ್ವಾಮಿ ಅಭಿನಯದ 4ನೇ ಸಿನಿಮಾ ರೈಡರ್ ಇದೇ ವಾರ ರಿಲೀಸ್ ಆಗುತ್ತಿದೆ. ಆ್ಯಕ್ಷನ್, ಲವ್, ಸೆಂಟಿಮೆಂಟ್ ಮಧ್ಯೆ ಟ್ರೇಲರಿನಲ್ಲೇ ಕಿಕ್ ಕೊಡ್ತಿರೋದು ಕಾಮಿಡಿ. ಕಾಶ್ಮೀರ ಪರದೇಸಿ ಮುದ್ದು ಮುದ್ದಾದ ಮುಖವನ್ನು ಸರ್ಕಲ್ ಮಾರಮ್ಮನಿಗೆ ಹೋಲಿಸೋ ರೈಡರ್, ತುಟಿಯಂಚಿನಲ್ಲೇ ಒಂದು ನಗೆ ಚೆಲ್ಲಿ ವ್ಹಾವ್ ಎನ್ನಿಸಿಬಿಡ್ತಾರೆ.
ಮೀಟೂ ತರಲೆ, ಪೊಲೀಸರ ಲಂಚದ ಆಟ, ಯೂಟ್ಯೂಬ್ ಚಾನೆಲ್ಲು.. ಇವೆಲ್ಲದರಲ್ಲೂ ಚಿಕ್ಕಣ್ಣ ಮತ್ತು ಶಿವರಾಜ್ ಕೆ.ಆರ್.ಪೇಟೆ ಕಿಕ್ಕೇರಿಸುತ್ತಾರೆ. ಅಂದಹಾಗೆ ಇದಿಷ್ಟೂ ಕಿಕ್ ಸಿಕ್ಕೋದು ಟ್ರೇಲರಿನಲ್ಲಿ. ವಿಜಯ್ ಕುಮಾರ್ ಕೊಂಡ ಅವರ ಫುಲ್ ಸಿನಿಮಾದಲ್ಲಿ ಆ್ಯಕ್ಷನ್, ಲವ್, ಸೆಂಟಿಮೆಂಟ್ ಜೊತೆ ಹೊಟ್ಟೆ ಹುಣ್ಣಾಗಿಸೋ ಕಾಮಿಡಿಯ ಒಗ್ಗರಣೆಯೂ ಇದೆ ಅನ್ನೋದರ ಸುಳಿವಿದು. ಕ್ರಿಸ್‍ಮಸ್ ದಿನ ಕಾಮಿಡಿ ಕಿಕ್ ಏರಿಸಿಕೊಳ್ಳೋಕೆ ರೆಡಿಯಾಗಿ..