` ಒಂದೇ ದಿನ ಬಡವ ರಾಸ್ಕಲ್, ರೈಡರ್ :ಡಾಲಿಗೆ ಫೋನ್ ಮಾಡಿದ ನಿಖಿಲ್ ಹೇಳಿದ್ದೇನು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಒಂದೇ ದಿನ ಬಡವ ರಾಸ್ಕಲ್, ರೈಡರ್ :ಡಾಲಿಗೆ ಫೋನ್ ಮಾಡಿದ ನಿಖಿಲ್ ಹೇಳಿದ್ದೇನು?
Dhananjay, Nikhil Gowda

ಇದೇ ಕ್ರಿಸ್‍ಮಸ್`ಗೆ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಮತ್ತು ಡಾಲಿ ಧನಂಜಯ್ ಅವರ ಬಡವ ರಾಸ್ಕಲ್ ಎರಡೂ ಸಿನಿಮಾ ರಿಲೀಸ್ ಆಗುತ್ತಿವೆ. ಈ ತಿಂಗಳಲ್ಲಿ ಡಾಲಿಗೆ ಇದು ಸೆಕೆಂಡ್ ರಿಲೀಸ್. ಕಳೆದ ವಾರ ಪುಷ್ಪ ಬಂದಿತ್ತು. ಈಗ ಅವರದ್ದೇ ನಿರ್ಮಾಣದ ಬಡವ ರಾಸ್ಕಲ್. ನಿಖಿಲ್‍ಗೆ ಹೆಚ್ಚು ಕಮ್ಮಿ 2 ವರ್ಷಗಳ ನಂತರ ರೈಡರ್ ಸಿನಿಮಾ. ಇಂತಹಾ ಹೊತ್ತಿನಲ್ಲಿ ಎರಡೂ ಚಿತ್ರಗಳ ಹೀರೋಗಳು ಪರಸ್ಪರ ಮಾತನಾಡಿಕೊಂಡರೆ ಹೇಗಿರುತ್ತೆ?

ಬಡವ ರಾಸ್ಕಲ್ ಸಿನಿಮಾ ಟ್ರೇಲರ್ ನೋಡಿದೆ. ಖುಷಿಯಾಯ್ತು. ತುಂಬಾ ಚೆನ್ನಾಗಿದೆ. ನಮ್ಮ ಚಿತ್ರ ಬಿಡುಗಡೆ ದಿನವೇ ಬಡವ ರಾಸ್ಕಲ್ ಕೂಡಾ ರಿಲೀಸ್ ಆಗುತ್ತಿದೆ. ಆ ಚಿತ್ರವೂ ಗೆಲ್ಲಲಿ. ನಮ್ಮ ಚಿತ್ರವೂ ಗೆಲ್ಲಲಿ. ಎರಡೂ ಸಿನಿಮಾ ಗೆಲ್ಲಬೇಕು ಎಂದು ಧನಂಜಯ್‍ಗೆ ಫೋನ್ ಮಾಡಿ ಹೇಳಿದೆ. ಅವರೂ ಅದೇ ಮಾತು ಹೇಳಿದರು. ನಮ್ಮ ಮಾರ್ಕೆಟ್ ದೊಡ್ಡದಿದೆ. ಎರಡು ಚಿತ್ರಗಳು ಒಂದೇ ದಿನ ಬಂದರೆ ದೊಡ್ಡ ಪ್ರಾಬ್ಲಂ ಏನೂ ಆಗಲ್ಲ ಎಂದಿದ್ದಾರೆ ನಿಖಿಲ್.

ಅಂದಹಾಗೆ ನಿಖಿಲ್ ಇಷ್ಟೆಲ್ಲ ಹೇಳಿದ್ದು ಅವರದ್ದೇ ನಟನೆಯ ರೈಡರ್ ಚಿತ್ರದ ಪ್ರೆಸ್‍ಮೀಟ್‍ನಲ್ಲಿ..