` ಶಿವಣ್ಣ, ಅಪ್ಪು ನೆನೆದು ಭಾವುಕರಾದ ಬಡವ ರಾಸ್ಕಲ್ : ಅಲ್ಲಿತ್ತು ಇಡೀ ಚಿತ್ರರಂಗ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶಿವಣ್ಣ, ಅಪ್ಪು ನೆನೆದು ಭಾವುಕರಾದ ಬಡವ ರಾಸ್ಕಲ್ : ಅಲ್ಲಿತ್ತು ಇಡೀ ಚಿತ್ರರಂಗ
Badava Rascal Movie Image

ಶಿವರಾಜ್‍ಕುಮಾರ್, ಹಂಸಲೇಖ, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ವಸಿಷ್ಠ ಸಿಂಹ, ರಚಿತಾ ರಾಮ್, ನಿಧಿ ಸುಬ್ಬಯ್ಯ..

ಇವರೆಲ್ಲ ಬಡವ ರಾಸ್ಕಲ್ ಚಿತ್ರತಂಡದಲ್ಲಿಲ್ಲ. ಆದರೆ ಡಾಲಿಯ ಅಭಿಮಾನದ ಬಳಗದಲ್ಲಿರುವವರು. ಡಾಲಿ ಧನಂಜಯ್ ಇದೇ ಮೊದಲ ಬಾರಿಗೆ ನಿರ್ಮಾಪಕರೂ ಆಗಿರುವ ಚಿತ್ರ ಬಡವ ರಾಸ್ಕಲ್ ಚಿತ್ರಕ್ಕೆ ಶುಭ ಕೋರಲೆಂದು ಬಂದಿದ್ದವರು... ಡಾಲಿ ಧನಂಜಯ್ ಚಿತ್ರರಂಗದಲ್ಲಿ ಗಳಿಸಿರೋ ಆಸ್ತಿ ಬಡವ ರಾಸ್ಕಲ್ ಈವೆಂಟ್‍ನಲ್ಲಿ ಕಾಣುತ್ತಿತ್ತು.

ಟಗರು ಮಾಡಿದಾಗ ಸಿನಿಮಾ ನೋಡಿದವರೆಲ್ಲ ನಿಮಗಿಂತ ಡಾಲಿ ಪಾತ್ರ ಚೆನ್ನಾಗಿದೆ ಎಂದಾಗ ಖುಷಿಯಾಯ್ತು. ಒಬ್ಬನೇ ಮೆರೆಯೋ ಆಸೆ ನನಗಿಲ್ಲ. 35 ವರ್ಷ ಆಗಿ ಹೋಗಿದೆ. ಈಗ ಧನಂಜಯ್ ನಿರ್ಮಾಪಕರಾಗಿದ್ದಾರೆ. ಒಳ್ಳೆಯದಾಗಲಿ. ನಾನು 24ನೇ ತಾರೀಕು ಮೈಸೂರಿನಲ್ಲಿರುತ್ತೇನೆ. ಅಲ್ಲಿಯೇ ಆ ದಿನವೇ ಸಿನಿಮಾ ನೋಡಿ ಹೇಗಿದೆ ಅನ್ನೋದನ್ನ ಹೇಳ್ತೀನಿ ಎಂದು ವೇದಿಕೆಯಲ್ಲೇ ಭರವಸೆ ಕೊಟ್ಟರು ಶಿವ ರಾಜ್ ಕುಮಾರ್.

ನಾನು ನನ್ನ ಚಿತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರ ಆಶೀರ್ವಾದದೊಂದಿಗೆ.. ಎಂದು ಹಾಕಿಕೊಂಡಿದ್ದೇನೆ ಎಂದರೆ ಅವರು ನನಗೆ  ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ಅಪ್ಪು ಸರ್ ಕೂಡಾ ನನಗೆ ಗೈಡ್ ಮಾಡಿದ್ದರು. ಪ್ರೊಡಕ್ಷನ್ ವೇಳೆ ಹಣ ಖರ್ಚು ಮಾಡುವಾಗ ಎಚ್ಚರಿಕೆಯಿರಲಿ, ಬಿಸಿನೆಸ್ ಮೇಲೆ ನಿಗಾ ಇರಲಿ ಎಂದಿದ್ದರು. ಮುಹೂರ್ತಕ್ಕೆ ಬರೋಕೆ ಆಗಲಿಲ್ಲ ಎಂದು ಕರೆಸಿಕೊಂಡು ಅವರೇ ಪೋಸ್ಟರ್ ರಿಲೀಸ್ ಮಾಡಿ ಬೆನ್ನು ತಟ್ಟಿದ್ದರು ಎಂದು ನೆನಪಿಸಿಕೊಂಡರು ಡಾಲಿ ಧನಂಜಯ್.

ಬಡವ ರಾಸ್ಕಲ್ ಇದೇ ವಾರ ರಿಲೀಸ್ ಆಗುತ್ತಿದ್ದು, ಶಂಕರ್ ಗುರು ಡೈರೆಕ್ಷನ್ ಇದೆ. ಅಮೃತಾ ಅಯ್ಯಮಗಾರ್, ತಾರಾ, ರಂಗಾಯಣ ರಘು, ನಾಗಭೂಷಣ್, ಪೂರ್ಣಚಂದ್ರ ಮೈಸೂರು.. ಮೊದಲಾದವರು ನಟಿಸಿರೋ ಸಿನಿಮಾ. ಹಾಡುಗಳು ಕ್ಲಿಕ್ ಆಗಿವೆ. ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಜಸ್ಟ್ ಎಂಜಾಯ್..