ಡಿಸೆಂಬರ್ 24ರಂದ ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾಗಳ ದೊಡ್ಡ ಹಬ್ಬವೇ ಇದೆ. ಆ ದಿನ ಕನ್ನಡದಲ್ಲಿ ಇಬ್ಬರು ಸ್ಟಾರ್ ನಟರ ಚಿತ್ರಗಳು ರಿಲೀಸ್ ಆಗುತ್ತಿವೆ.
ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ರಿಲೀಸ್ ಆಗುತ್ತಿದ್ದು, ಆಲ್‍ಮೋಸ್ಟ್ 2 ವರ್ಷಗಳ ನಂತರ ತೆರೆಯ ಮೇಲೆ ನಿಖಿಲ್ ಕಾಣಿಸುತ್ತಿದ್ದಾರೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರದಲ್ಲಿ ಬ್ಯಾಸ್ಕೆಟ್ ಬಾಲ್ ಆಟಗಾರ, ಲವ್ ಸ್ಟೋರಿ, ಅಪ್ಪನ ಪ್ರೀತಿ.. ಎಲ್ಲವೂ ಇದೆ. ಕಾಶ್ಮೀರ ಪರದೇಸಿ ನಾಯಕಿ.
ಇನ್ನೊಂದೆಡೆ ವಿಭಿನ್ನವಾಗಿ ಟ್ರೆಂಡ್ ಸೃಷ್ಟಿಸಿರೋ ಬಡವ ರಾಸ್ಕಲ್. ಡಾಲಿ ಧನಂಜಯ್ ಬ್ಯಾನರಿನ ಮೊದಲ ಸಿನಿಮಾ. ಧನಂಜಯ್ ಎದುರು ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದರೆ, ರಂಗಾಯಣ ರಘು, ತಾರಾ ಮೊದಲಾದ ಸೀನಿಯರ್ ಕಲಾವಿದರು ನಟನೆಯಲ್ಲಿ ಫೈಟ್ ಕೊಟ್ಟಿದ್ದಾರೆ. ಮಿಡ್ಲ್ ಕ್ಲಾಸ್ ಲೈಫಿನ ರಾ ಸ್ಟೋರಿಯಂತೆ ಕಾಣಿಸೋ ಚಿತ್ರ ಮಿಡ್ಲ್ ಕ್ಲಾಸ್ ಹುಡುಗ, ಹುಡುಗಿಯರನ್ನು ಆಗಲೇ ಸೆಳೆಯುತ್ತಿದೆ. ಶಂಕರ್ ಗುರು ನಿರ್ದೇಶನದ ಬಡವ ರಾಸ್ಕಲ್ ಕೂಡಾ ಕ್ರಿಸ್‍ಮಸ್‍ಗೇ ಬರುತ್ತಿದೆ. ಜಸ್ಟ್ ಎಂಜಾಯ್..