ಟ್ರೇಲರಿನಲ್ಲೊಂದು ಕೊನೆ ಡೈಲಾಗ್ ಇದೆ. ಸಿನಿಮಾ ಬೇಡ.. ಪಾರ್ಕೂ ಬೇಡ ಅನ್ನೋ ಫ್ರೆಂಡ್, ಬಾರ್‍ಗೆ ಹೋಗೋಣ ಎಂದಾಗ.. ನಾನ್ ನಿನ್ನ ಮಾತನ್ನ ಯಾವತ್ತಾದ್ರೂ ಮೀರಿದ್ದೀನಾ ಅನ್ನೋ ಡೈಲಾಗ್ ಹೊಡೆಯುವ ಸೀನ್.. ಫನ್ನಿಯಾಗಿರೋ ಸೀನ್ ಫ್ರೆಂಡ್ಸುಗಳಿಗೆ ಇಷ್ಟವಾಗಿ ವೈರಲ್ಲೂ ಆಗ್ತಿರೋವಾಗ ಬಡವ ರಾಸ್ಕಲ್ ಟೈಟಲ್ ಟ್ರ್ಯಾಕ್ ಹೊರಬಿದ್ದಿದೆ.
ಇದು ಫ್ರೆಂಡ್ಸ್‍ಗಳ ಆ್ಯಂಥಮ್ ಅರ್ಥಾತ್ ರಾಷ್ಟ್ರಗೀತೆ ಅನ್ನೋ ಅರ್ಥದಲ್ಲಿ ಅಭಿಮಾನಿಗಳು ಖುಷಿಯಾಗುತ್ತಿದ್ದಾರೆ. ಜೀವಕ್ಕೆ ಜೀವ ಕೊಡೋ.. ಕಷ್ಟಕ್ಕೆ ಹೆಗಲು ಕೊಡೋ.. ನೊಂದಾಗ ಹೆಗಲು ಕೊಟ್ಟು ಸಾಂತ್ವನ ಹೇಳೋ.. ಫ್ರೆಂಡ್ ಬಗ್ಗೆ ವರ್ಣನೆ ಮಾಡಿರೋ ಹಾಡಿದು. ಭರ್ಜರಿ ಚೇತನ್ ಕುಮಾರ್ ಬರೆದಿರೋ ಸಾಹಿತ್ಯಕ್ಕೆ ಅಷ್ಟೇ ಚೆಂದದ ಮಾಸ್ ಮ್ಯೂಸಿಕ್ ಕೊಟ್ಟಿರೋದು ವಾಸುಕಿ ವೈಭವ್.
ಈಗಾಗಲೇ ಬಡವ ರಾಸ್ಕಲ್ ಚಿತ್ರದ ಉಡುಪಿ ಹೋಟೆಲು ಮತ್ತು ಆಗಾಗ ನೆನಪಾಗುತ್ತಾಳೆ ಹಾಡುಗಳು ಹಿಟ್ ಆಗಿದ್ದು, ಹಿಟ್ ಸಾಲಿಗೆ ಹೊಸ ಸೇರ್ಪಡೆ ಬಡವ ರಾಸ್ಕಲ್ ಟೈಟಲ್ ಟ್ರ್ಯಾಕ್.