` ಅಪ್ಪನ ಹುಟ್ಟುಹಬ್ಬಕ್ಕೆ ನಿಖಿಲ್ ಕುಮಾರಸ್ವಾಮಿ ರೈಡರ್ ಗಿಫ್ಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಪ್ಪನ ಹುಟ್ಟುಹಬ್ಬಕ್ಕೆ ನಿಖಿಲ್ ಕುಮಾರಸ್ವಾಮಿ ರೈಡರ್ ಗಿಫ್ಟ್
Raider Movie Image

ಡಿಸೆಂಬರ್ 16. ಈ ಬಾರಿ ನಿಖಿಲ್ ಕುಮಾರಸ್ವಾಮಿಗೆ ಸಖತ್ ಸ್ಪೆಷಲ್. ಅಪ್ಪನ ಹುಟ್ಟುಹಬ್ಬದಂದೇ ನಿಖಿಲ್ ಅಭಿನಯಿಸಿರೋ ರೈಡರ್ ಟ್ರೇಲರ್ ರಿಲೀಸ್ ಆಗಿದೆ. ಡಿಸೆಂಬರ್ 24ರಂದು ತೆರೆಗೆ ಬರುತ್ತಿರೋ ರೈಡರ್ ಚಿತ್ರದ ಟ್ರೇಲರ್ ಆ್ಯಕ್ಷನ್, ಲವ್ ಮತ್ತು ಮಾಸ್ ಕಥೆಗಳಿರೋ ಸಿಗ್ನಲ್ ಕೊಟ್ಟಿದೆ.

ಮುದ್ದು ಮುದ್ದಾಗಿ ಕಾಣಿಸೋ ಕಾಶ್ಮೀರ ಪರದೇಶಿ ಎದುರು ನಿಖಿಲ್ ಲವ್ವರ್ ಬಾಯ್ ಆಗಿದ್ದರೆ, ತಂದೆ ಪಾತ್ರಧಾರಿ ಅಚ್ಯುತ್ ಕುಮಾರ್ ಜೊತೆ ಅಪ್ಪಟ ಮಗನಾಗಿದ್ದಾರೆ. ವಿಲನ್ ಗರುಡ ರಾಮ್ ಎದುರು ರಗಡ್ ಆಗಿದ್ದಾರೆ. ಫೀಲ್ಡಿನಲ್ಲಿ ಬ್ಯಾಸ್ಕೆಟ್ ಬಾಲ್ ಆಟಗಾರನಾಗಿಯೂ ವ್ಹಾವ್ ಎನಿಸುತ್ತಾರೆ. ಫೈಟಿಂಗ್‍ನಲ್ಲೂ ಮಸ್ತ್ ಎನಿಸುತ್ತಾರೆ. ಒಟ್ಟಾರೆ ಇಲ್ಲಿ ನಿಖಿಲ್ ಅವರದ್ದು ಫುಲ್ ಪ್ಯಾಕೇಜ್.

ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಢಾಳಾಗಿ ಕಾಣಿಸುತ್ತವೆ. ನಿರ್ಮಾಪಕರಾದ ಚಂದ್ರು ಮನೋಹರನ್ ಮತ್ತು ಸುನಿಲ್ ಗೌಡ ಚಿತ್ರವನ್ನು ಅದ್ಧೂರಿಯಾಗಿಯೇ ಮಾಡಿರುವುದು ಎದ್ದು ಕಾಣುತ್ತದೆ.