` ಭಟ್ಟರ ಪದವಿಪೂರ್ವಕ್ಕೆ ಅದಿತಿ ಪ್ರಭುದೇವ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಭಟ್ಟರ ಪದವಿಪೂರ್ವಕ್ಕೆ ಅದಿತಿ ಪ್ರಭುದೇವ
Aditi Prabhudeva

ಪದವಿಪೂರ್ವ. ಯೋಗರಾಜ್ ಭಟ್ ನಿರ್ಮಾಪಕರಾಗಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರೋ ಸಿನಿಮಾ. ಶಾಮನೂರು ಕುಟುಂಬದ ಪೃಥ್ವಿ ಶಾಮನೂರು ನಾಯಕರಾಗಿರುವ ಚಿತ್ರಕ್ಕೆ ಈಗ ಅದಿತಿ ಪ್ರಭುದೇವ ಎಂಟ್ರಿ ಕೊಟ್ಟಿದ್ದಾರೆ.

ಅಂಜಲಿ ಅನೀಶ್, ಯಶಾ ಶಿವಕುಮಾರ್ ಈಗಾಗಲೇ ಚಿತ್ರದಲ್ಲಿ ನಾಯಕಿಯರಾಗಿದ್ದು, ಈಗ ಅದಿತಿ ಪ್ರಭುದೇವ ಕೂಡಾ ಎಂಟ್ರಿಯಾಗಿದ್ದಾಗಿದೆ. ಹದಿಹರೆಯದ ವಯಸ್ಸಿನವರ ಹುಚ್ಚು ಮನಸ್ಸುಗಳ ಲವ್ ಸ್ಟೋರಿ ಚಿತ್ರದಲ್ಲಿದೆಯಂತೆ. ಮೊಬೈಲ್, ಫೇಸ್‍ಬುಕ್, ವಾಟ್ಸಪ್ಪುಗಳಿಲ್ಲದ ಕಾಲದ ಲವ್ ಸ್ಟೋರಿ ಹೇಳುತ್ತಿದ್ದಾರೆ ಹರಿಪ್ರಸಾದ್ ಜಯಣ್ಣ. ಯೋಗರಾಜ್ ಭಟ್ ಅವರ ಜೊತೆ ರವಿ ಶಾಮನೂರು ಕೂಡಾ ನಿರ್ಮಾಪಕರಾಗಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.