` ನಿರ್ದೇಶಕಿಯೇ ನಾಯಕಿ.. ರಾಘವೇಂದ್ರ ರಾಜ್‍ಕುಮಾರ್ ನಾಯಕ : ರಾಜಿ ಸ್ಪೆಷಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಿರ್ದೇಶಕಿಯೇ ನಾಯಕಿ.. ರಾಘವೇಂದ್ರ ರಾಜ್‍ಕುಮಾರ್ ನಾಯಕ : ರಾಜಿ ಸ್ಪೆಷಲ್
ನಿರ್ದೇಶಕಿಯೇ ನಾಯಕಿ.. ರಾಘವೇಂದ್ರ ರಾಜ್‍ಕುಮಾರ್ ನಾಯಕ : ರಾಜಿ ಸ್ಪೆಷಲ್

ನಿರ್ದೇಶಕರು ನಾಯಕರಾಗೋದು.. ನಾಯಕರು ನಿರ್ದೇಶಕರಾಗೋದು ಹೊಸದಲ್ಲ. ಕ್ಯಾಮೆರಾ ಹಿಂದಿರೋವ್ರು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವುದೂ ಟ್ರೆಂಡ್ ಆಗಿಬಿಟ್ಟಿದೆ. ಆದರೆ, ನಿರ್ದೇಶಕಿಯೊಬ್ಬರು ನಾಯಕಿಯಾಗೋದು ಅಪರೂಪ. ಬಹುಶಃ ಇಂಥಾದ್ದೊಂದು ಪ್ರಯತ್ನ ಇದೇ ಮೊದಲಿದ್ದರೂ ಆಶ್ಚರ್ಯವಿಲ್ಲ. ಈ ದಾಖಲೆ ಆಗಿರೋದು ರಾಜಿ ಚಿತ್ರದಲ್ಲಿ.

ಈ ಚಿತ್ರಕ್ಕೆ ರಾಘವೇಂದ್ರ ರಾಜ್‍ಕುಮಾರ್ ಹೀರೋ. ಪ್ರೀತಿ ಎಸ್.ಬಾಬು ನಾಯಕಿ. ನಾಯಕಿಯಷ್ಟೇ ಅಲ್ಲ, ನಿರ್ದೇಶಕಿಯೂ ಅವರೇ. ಚಿತ್ರಕ್ಕೆ ವಸುಮತಿ ಉಡುಪ ಅವರ ಕಥೆಯೇ ಆಧಾರ. ಗಂಡ ಹೆಂಡತಿ ನಡುವಣ ಒಂದು ಸುಂದರ ಒಪ್ಪಂದವನ್ನಿಟ್ಟುಕೊಂಡು ರೂಪಿಸಿರುವ ಸಿನಿಮಾ ಇದು. ವಿಶಿಷ್ಟವಾದ ಕಥೆ ಇದು ಎನ್ನುತ್ತಾರೆ ಪ್ರೀತಿ. ಸಹಕಲಾವಿದೆಯಾಗಿ, ಸಹ ನಿರ್ದೇಶಕಿಯಾಗಿ ಅನುಭವ ಇರೋ ಪ್ರೀತಿ ಈ ಚಿತ್ರದಲ್ಲಿ ನಿರ್ದೇಶಕಿಯೂ ಅವರೇ. ನಾಯಕಿಯೂ ಅವರೇ.

ಬಸವರಾಜ್ ಎಂಬುವವರು ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದು, ಚಿತ್ರದ ಮುಹೂರ್ತಕ್ಕೆ ಆಗಮಿಸಿ ಶುಭ ಕೋರಿದ್ದು ಮದಗಜ ಶ್ರೀಮುರಳಿ.