` `ಆ ದಿನಗಳು' ಜೋಡಿ 15 ವರ್ಷಗಳ ನಂತರ ಪುನರ್ ಮಿಲನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
`ಆ ದಿನಗಳು' ಜೋಡಿ 15 ವರ್ಷಗಳ ನಂತರ ಪುನರ್ ಮಿಲನ
Chethan, Archana Shatry

ಇವತ್ತಿಗೂ ಚೇತನ್ ಅವರನ್ನು ಕನ್ನಡಿಗರು ಗುರುತಿಸೋದು ಆ ದಿನಗಳು ಚೇತನ್ ಎಂದೇ. ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ.. ಆ ದಿನಗಳು.. ಹಾಡುಗಳು ಇವತ್ತಿಗೂ  ಜನಪ್ರಿಯ. ಚೇತನ್ ಅವರೊಂದಿಗೆ ನಟಿಸಿದ್ದ ಅರ್ಚನಾ ಶಾಸ್ತ್ರಿ ಕೂಡಾ ಅಷ್ಟೇ ಜನಪ್ರಿಯ. ಆದರೆ, ಆ ಸಿನಿಮಾ ಹಿಟ್ ಆದರೂ ಜೋಡಿ ರಿಪೀಟ್ ಆಗಿರಲಿಲ್ಲ. ಈಗ.. 15 ವರ್ಷಗಳ ಬಳಿಕ ಚೇತನ್-ಅರ್ಚನಾ ಜೋಡಿ ಒಂದಾಗುತ್ತಿದೆ.

ಡೇರ್ ಟು ಸ್ಲೀಪ್ ಅನ್ನೋದು ಚೇತನ್ ಮತ್ತು ಅರ್ಚನಾ ಒಟ್ಟಿಗೇ ನಟಿಸುತ್ತಿರುವ ಹೊಸ ಚಿತ್ರದ ಹೆಸರು. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಿದ್ಧವಾಗುತ್ತಿರೋ ಈ ಚಿತ್ರದಲ್ಲಿ ಚೇತನ್ ಅವರದ್ದು ಸಖತ್ ಸೋಮಾರಿಯ ಪಾತ್ರವಂತೆ. ವೆಬ್ ಸಿರೀಸ್ ಚಿತ್ರಗಳ ಮೂಲಕ ಗಮನ ಸೆಳೆದಿರೋ ಅಭಿರಾಮ್ ಈ ಚಿತ್ರಕ್ಕೆ ನಿರ್ದೇಶಕ.