ಸಿದ್ಧ ಸೂತ್ರಗಳಿಗಿಂತ ಹೊರತಾದ ಬೇರೆಯದೇ ರೀತಿಯ ಕಥೆ, ನಿರೂಪಣೆಯಿಂದ ಗಮನ ಸೆಳೆದ ಗರುಡ ಗಮನ ವೃಷಭ ವಾಹನ ಯಶಸ್ವಿ 25ನೇ ದಿನ ಪೂರೈಸಿದೆ. ರಾಜ್ ಬಿ.ಶೆಟ್ಟಿ ನಿರ್ದೇಶನದ ಚಿತ್ರವಿದು. ರಿಷಬ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಇಬ್ಬರೂ ಪ್ರಧಾನ ಪಾತ್ರದಲ್ಲಿದ್ದ ಚಿತ್ರ ಕರಾವಳಿ ಭಾಗದ ಅಂಡರ್‍ವಲ್ರ್ಡ್ ಕಥೆಯನ್ನು ವಿಭಿನ್ನವಾಗಿ ಹೇಳಿದ್ದ ಚಿತ್ರ.
ಒಂದೆಡೆ ಕ್ರೌರ್ಯ ಅತಿಯಾಯಿತು, ದೇವರ ಹಾಡು ಬಳಸಬಾರದಿತ್ತು ಎಂದು ಕೆಲವರು ವಾದಿಸುತ್ತಿದ್ದಾರೆ. ಕೆಲವರು ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದಾರೆ. ಬೇರೆಯವರಾಗಿದ್ದರೆ ಅದನ್ನೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದರೇನೋ.. ಆದರೆ ಈ ಶೆಟ್ಟಿ ಬ್ರದರ್ಸ್ ಆ ಕೆಲಸ ಮಾಡದೆ ಚಿತ್ರದ ಪಾಸಿಟಿವ್‍ಗಳನ್ನೇ ಪ್ರಚಾರ ಮಾಡಿ ಗೆದ್ದಿದ್ದಾರೆ.