ಆರ್‍ಆರ್‍ಆರ್. ರಾಜಮೌಳಿ ನಿರ್ದೇಶನದ ಸಿನಿಮಾದ ಟ್ರೇಲರ್ ಸಂಚಲನವನ್ನೇ ಸೃಷ್ಟಿಸಿದೆ. ಟ್ರೇಲರ್‍ನಲ್ಲೇ ಇಡೀ ಕಥೆ ಹೇಳಿರುವ ರಾಜಮೌಳಿ ಮತ್ತೊಮ್ಮೆ ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಗೆದ್ದಿದ್ದಾರೆ. ಅದರಲ್ಲೂ ಕನ್ನಡದವರಿಗೆ ಆರ್‍ಆರ್‍ಆರ್ ಕೊಟ್ಟಿರೋ ಥ್ರಿಲ್ ಬೇರೆಯದೇ ರೀತಿಯದ್ದು. ಕನ್ನಡದಲ್ಲಿಯೂ ಆರ್‍ಆರ್‍ಆರ್ ಟ್ರೇಲರ್ ರಿಲೀಸ್ ಆಗಿದೆ.
ಈ ಟ್ರೇಲರ್‍ನಲ್ಲಿ ಎನ್‍ಟಿಆರ್ ಮತ್ತು ರಾಮ್ ಚರಣ್ ತೇಜ ಸ್ವತಃ ತಾವೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಇದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಎನ್‍ಟಿಆರ್ ಅವರ ತಾಯಿಯೇನೋ ಕನ್ನಡದವರು. ಹೀಗಾಗಿ ಎನ್‍ಟಿಆರ್‍ಗೆ ಸ್ವಲ್ಪ ಕನ್ನಡ ಗೊತ್ತು. ಆದರೆ ರಾಮ್ ಚರಣ್ ತೇಜ ಹಾಗಲ್ಲ. ಆದರೂ.. ಇಬ್ಬರ ಧ್ವನಿ.. ಅದೂ ಕನ್ನಡದ ಧ್ವನಿ ಥ್ರಿಲ್ ಕೊಡುತ್ತಿದೆ.
ಆದರೆ.. ಇಬ್ಬರೂ ಕನ್ನಡದಲ್ಲಿ ಇಡೀ ಸಿನಿಮಾದಲ್ಲಿ ಡಬ್ ಮಾಡಿದ್ದಾರಾ..? ಗೊತ್ತಿಲ್ಲ. ಅದಕ್ಕೆ ಸಿನಿಮಾ ರಿಲೀಸ್ ಆಗುವವರೆಗೂ ಕಾಯಲೇಬೇಕು.