` ಅಬ್ಬಬ್ಬಾ.. ಮಾರ್ಟಿನ್ ವರ್ಕೌಟ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಬ್ಬಬ್ಬಾ.. ಮಾರ್ಟಿನ್ ವರ್ಕೌಟ್..!
Martin Movie Image

ಪೊಗರು ನಂತರ ಧ್ರುವ ಸರ್ಜಾ ತೆರೆ ಮೇಲೆ ಬರಲಿರೋದು ಮಾರ್ಟಿನ್ ಅವತಾರದಲ್ಲಿ. ಇದೂ ಕೂಡಾ ಆ್ಯಕ್ಷನ್ ಥ್ರಿಲ್ಲರ್. ಹೀಗಾಗಿ ಧ್ರುವ ಈ ಬಾರಿಯೂ ಬಾಡಿ ಬಿಲ್ಡಪ್ ಮೊರೆ ಹೋಗಿದ್ದಾರೆ.ಚಿತ್ರಕ್ಕಾಗಿ ಇನ್ನಷ್ಟು ಇನ್ನಷ್ಟು ತಯಾರಾಗುತ್ತಿರೋ ಧ್ರುವ ಸರ್ಜಾ ಅವರ ವರ್ಕೌಟ್ ವಿಡಿಯೋ ಅಭಿಮಾನಿಗಳಿಗೆ ಥ್ರಿಲ್ ಕೊಡುತ್ತಿದೆ.

ಪೊಗರು ವೇಳೆ ಧ್ರುವ ಸರ್ಜಾ ಅವರ ತೋಳಿನ ಸುತ್ತಳತೆ 19 ಸೆಂ.ಮೀ. ಇತ್ತು. ಈಗ ಇನ್ನಷ್ಟು ಹೆಚ್ಚಾಗಿರಬಹುದೇನೋ.. ಏಕೆಂದರೆ ವರ್ಕೌಟ್ ಹಾಗಿದೆ. ಚಿತ್ರದಲ್ಲಿ ದೈತ್ಯಾಕಾರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಳ್ಳಲಿದ್ದಾರೆ.

ಅದ್ಧೂರಿ ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಧ್ರುವ ನಟಿಸುತ್ತಿರೋ 2ನೇ ಸಿನಿಮಾ ಮಾರ್ಟಿನ್. ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕರ ಜೊತೆ ಮತ್ತೊಮ್ಮೆ ಜೊತೆಗೂಡಿದ್ದಾರೆ ಧ್ರುವ. ರಾಜ್ ವಿಷ್ಣು, ಗಾಳಿಪಟ 2 ಚಿತ್ರದ ಹೀರೋಯಿನ್ ವೈಭವಿ ಶಾಂಡಿಲ್ಯ ಚಿತ್ರಕ್ಕೆ ನಾಯಕಿ. ಉದಯ್ ಕೆ.ಮೆಹ್ತಾ ನಿರ್ಮಾಣದಲ್ಲಿ ಬರುತ್ತಿರೋ ಚಿತ್ರದ ಚಿತ್ರೀಕರಣ ಜನವರಿ ಹೊತ್ತಿಗೆ ಕಂಪ್ಲೀಟ್ ಆಗುವ ನಿರೀಕ್ಷೆ ಇದೆ.