ಮಂಡ್ಯಕ್ಕೂ ನಟ ನಿಖಿಲ್ ಕುಮಾರಸ್ವಾಮಿ ಅವರಿಗೂ ಇರೋ ನಂಟು ಬೇರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಮಂಡ್ಯದಲ್ಲಿ ಸೋತಿದ್ದರೂ, ಕ್ಷೇತ್ರವನ್ನು ಮರೆತಿಲ್ಲ. ಈಗ ರೈಡರ್ ರಿಲೀಸ್ ಪೂರ್ವ ಹಬ್ಬವನ್ನು ಮಂಡ್ಯದಲ್ಲೇ ಮಾಡುತ್ತಿದ್ದಾರೆ. ಡಿಸೆಂಬರ್ 19ಕ್ಕೆ ಮಂಡ್ಯದಲ್ಲಿ ರೈಡರ್ ಹಬ್ಬ.
ನಿಖಿಲ್ ಬ್ಯಾಸ್ಕೆಟ್ ಬಾಲ್ ಆಟಗಾರನಾಗಿ ನಟಿಸಿರೋ ಚಿತ್ರ ರೈಡರ್. ಕಾಶ್ಮೀರ ಪರದೇಸಿ ನಾಯಕಿಯಾಗಿರೋ ಚಿತ್ರಕ್ಕೆ ಲಹರಿ ವೇಲು ಮತ್ತು ಸುನಿಲ್ ಗೌಡ ನಿರ್ಮಾಪಕರು. ವಿಜಯಕುಮಾರ ಕೊಂಡ ನಿರ್ದೇಶನದ ಚಿತ್ರ ತೆಲುಗಿನಲ್ಲೂ ಬರಲಿದೆ.
ರೈಡರ್ ಲವ್ ಸ್ಟೋರಿ. ಎಲ್ಲರಿಗೂ ರೀಚ್ ಆಗುತ್ತೆ. ಪ್ರೀತಿಯಲ್ಲಿ ಪ್ರಾಮಾಣಿಕತೆ ಮತ್ತು ಅನಿರೀಕ್ಷಿತಗಳ ನಡುವಿನ ಕಥೆ ಹೇಳುತ್ತೆ. ಒಂದೊಳ್ಳೆ ಸಂದೇಶವೂ ಚಿತ್ರದಲ್ಲಿದೆ ಎಂದಿದ್ದಾರೆ ನಿಖಿಲ್. ರೈಡರ್ ಡಿಸೆಂಬರ್ 24ಕ್ಕೆ ಕ್ರಿಸ್‍ಮಸ್ ಸ್ಪೆಷಲ್ ಆಗಿ ಬಿಡುಗಡೆಯಾಗುತ್ತಿದೆ