ರಶ್ಮಿಕಾ ಮಂದಣ್ಣ ಹುಟ್ಟಿದ್ದು, ಬೆಳೆದಿದ್ದು, ಚಿತ್ರರಂಗಕ್ಕೆ ಪರಿಚಯವಾಗಿದ್ದು ಕನ್ನಡದಿಂದಲೇ ಆದರೂ.. ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆದ ಮೇಲೆ ಕನ್ನಡವನ್ನು ಮರೆತುಬಿಟ್ಟಿದ್ದಾರೆ ಅನ್ನೋದು ಅವರ ಮೇಲಿರೋ ಕಂಪ್ಲೇಂಟು. ಅದಕ್ಕೆ ತಕ್ಕಂತೆ ರಶ್ಮಿಕಾ ಕೂಡಾ ರಾಜ್ಯದ ಹೊರಗಡೆ ತನ್ನ ಕನ್ನಡ, ಕರ್ನಾಟಕ ಮೂಲದ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವುದನ್ನು ಅವಾಯ್ಡ್ ಮಾಡಿಕೊಂಡು ಬರುತ್ತಾರೆ. ಬಹುಶಃ ಕನ್ನಡತಿ ಎಂದು ಹೇಳಿಕೊಳ್ಳೋಕೆ ಅವಮಾನ ಎನ್ನಿಸುತ್ತಿರುಬೇಕೇನೋ.. ಇದು ಈಗ ಪುಷ್ಪ ಚಿತ್ರದಲ್ಲೂ ಮುಂದುವರೆದಿದೆ.
ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಅವರ ಜೊತೆ ನಟಿಸಿರೋ ಪುಷ್ಪ ಚಿತ್ರದ ಕನ್ನಡ ಟ್ರೇಲರ್ ನೋಡಿದವರಿಗೆ ಇದು ಗೊತ್ತಾಗುತ್ತಿದೆ. ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ತಾವೇ ಡಬ್ ಮಾಡಿದ್ದಾರೆ. ಆದರೆ ಕನ್ನಡಕ್ಕೆ ಬಂದಾಗ ಮಾತ್ರ ಅವರ ಪಾತ್ರಕ್ಕೆ ಬೇರೆಯವರಿಂದ ಧ್ವನಿ ಡಬ್ ಮಾಡಿಸಿದ್ದಾರೆ. ಇತ್ತೀಚೆಗೆ ಹಿಂದಿ ಟಿವಿ ಶೋವೊಂದರಲ್ಲಿ ಎಲ್ಲ ಭಾಷೆಯಲ್ಲೂ ತಮಗೆ ಯಾವ ಯಾವ ನಟ ಇಷ್ಟ ಎಂದು ಹೇಳಿದ್ದ ರಶ್ಮಿಕಾ ಮಂದಣ್ಣ, ಕನ್ನಡದ ನಟರ ಹೆಸರನ್ನು ಕೈಬಿಟ್ಟಿದ್ದರು.
ವಿಚಿತ್ರವೆಂದರೆ.. ರಶ್ಮಿಕಾ ಮಂದಣ್ಣ ಅವರ ಈ ಕನ್ನಡ ಪ್ರೀತಿಯ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದರೂ.. ರಶ್ಮಿಕಾ ಮಂದಣ್ಣ ಮಾತ್ರ ಡೋಂಟ್ಕೇರ್. ಅದು ತಮಗೆ ಗೊತ್ತೇ ಇಲ್ಲ ಎನ್ನುವಂತೆ ಇದ್ದುಬಿಟ್ಟಿದ್ದಾರೆ.