ವಿಕ್ರಾಂತ್ ರೋಣ. ಫೆಬ್ರವರಿ 24ಕ್ಕೆ ರಿಲೀಸ್. ಆದರೆ ಈ ಚಿತ್ರದಲ್ಲಿರೋ ವಿಶೇಷತೆಗಳು ಒಂದೆರಡಲ್ಲ. ಕಿಚ್ಚ ಸುದೀಪ್ ಫ್ಯಾನ್ಸ್ ಥ್ರಿಲ್ ಆಗೋ ಚಿತ್ರದಲ್ಲಿರೋದು ಸ್ಪೆಷಲ್‍ಗಳ ಮೇಲೆ ಸ್ಪೆಷಲ್.
ವಿಕ್ರಾಂತ್ ರೋಣ, ಒಂದಲ್ಲ..ಎರಡಲ್ಲ.. ಒಟ್ಟು 14 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅದೂ 3ಡಿ ರೂಪದಲ್ಲಿ. 3ಡಿ ಸ್ಪೆಷಲ್ ಕನ್ನಡಕ ಹಾಕ್ಕೊಂಡೇ ಸಿನಿಮಾ ನೋಡ್ಬೇಕು. ಆಗಲೇ ಸಿಗೋದು ಮಜಾ. ಒಟ್ಟು 55 ದೇಶಗಳಲ್ಲಿ ರಿಲೀಸ್ ಆಗುತ್ತಿದೆ ವಿಕ್ರಾಂತ್ ರೋಣ.
ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಜಾಕ್ ಮಂಜು, ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡ್ಯನ್ ನಿರ್ಮಾಪಕರು. ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರಂತೆ. ನಿರೂಪ್ ಭಂಡಾರಿ, ನೀತೂ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.