ಮೊದಲ ದಿನ : 2300 ಶೋ. 7.82 ಕೋಟಿ ಕಲೆಕ್ಷನ್
2ನೇ ದಿನ : 2500 ಶೋ. 5.64 ಕೋಟಿ ಕಲೆಕ್ಷನ್
3ನೇ ದಿನ : 2600 ಶೋ : 6.77 ಕೋಟಿ ಕಲೆಕ್ಷನ್
ಇದು ಅಧಿಕೃತ ರಿಪೋರ್ಟ್. ಬಿಕೆಟಿ ಏರಿಯಾದಲ್ಲಿ (ಬೆಂಗಳೂರು, ತಮಕೂರು, ಕೋಲಾರ) 9 ಕೋಟಿ, ಎಂಎಂಸಿಹೆಚ್ (ಮಂಡ್ಯ,ಮೈಸೂರು,ಚಾಮರಾಜನಗರ, ಹಾಸನ) 4 ಕೋಟಿ, ಶಿವಮೊಗ್ಗ-ಚಿಕ್ಕಮಗಳೂರು 2.2 ಕೋಟಿ, ದಾವಣಗೆರೆ 1 ಕೋಟಿ, ಹೈದರಾಬಾದ್ ಕರ್ನಾಟಕದಲ್ಲಿ 4 ಕೋಟಿ. ಇದು ಮದಗಜ ಚಿತ್ರದ ಬಾಕ್ಸಾಫೀಸ್ ಕಂಪ್ಲೀಟ್ ಡೀಟೈಲ್ಸ್.
ಶ್ರೀಮುರಳಿ, ಅಶಿಕಾ ರಂಗನಾಥ್, ಜಗಪತಿ ಬಾಬು ಅಭಿನಯದ ಚಿತ್ರ ಇದೇ ವಾರ ರಿಲೀಸ್ ಆಗಿದ್ದು, ಹಿಟ್ ಚಿತ್ರಗಳ ಸಾಲಿಗೆ ಸೇರಿದೆ. ನಮ್ಮ ಟಾರ್ಗೆಟ್ 3 ದಿನಕ್ಕೆ ಇದ್ದಿದ್ದು 20 ಕೋಟಿ. ಇನ್ನೂ ಹೆಚ್ಚಾಗಿಯೇ ಗಳಿಸಿದೆ. ಒಳ್ಳೆಯ ಚಿತ್ರವನ್ನು ಪ್ರೇಕ್ಷಕರು ಕೈಬಿಡಲ್ಲ. ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಿದ್ದರು. ಈಗ ಅದಕ್ಕೆ ಗೆಲುವೂ ಸಿಕ್ಕಿದೆ ಎಂದು ಖುಷಿಯಾಗಿದ್ದಾರೆ ಅಯೋಗ್ಯ ಮಹೇಶ್.. ಅಲ್ಲಲ್ಲ.. ಮದಗಜ ಮಹೇಶ್ ಕುಮಾರ್.