` ಕೆಜಿಎಫ್ 2 ಟೀಸರ್ ಹೊಸ ದಾಖಲೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಕೆಜಿಎಫ್ 2 ಟೀಸರ್ ಹೊಸ ದಾಖಲೆ
KGF Chapter 2 Image

ಕೆಜಿಎಫ್ ಮುಟ್ಟಿದ್ದೆಲ್ಲ ದಾಖಲೆಯಾಗುತ್ತಿದೆ. ಅದಕ್ಕೆ ಸಾಕ್ಷಿ ಸರಿಯಾಗಿ 10 ತಿಂಗಳ ಹಿಂದೆ ರಿಲೀಸ್ ಆಗಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದೆ.

ಈಗ ಟೀಸರ್ ನೋಡಿದವರ ಸಂಖ್ಯೆ ಎರಡೂಕಾಲು ಕೋಟಿ ದಾಟಿದೆ. ಟೀಸರ್‍ಗೆ ಸಿಕ್ಕಿರುವ ಲೈಕ್ಸ್ ಸಂಖ್ಯೆ 90 ಲಕ್ಷ ದಾಟಿದೆ. ಅಂದಹಾಗೆ ಇದು ಕೇವಲ ಹೊಂಬಾಳೆ ಫಿಲ್ಮ್ಸ್‍ನ ಅಧಿಕೃತ ಪೇಜ್‍ನ ಸಂಖ್ಯೆ ಮಾತ್ರ. ಅದನ್ನು ಬಿಟ್ಟು ಬೇರೆ ಕಡೆ ನೋಡಿರುವವರ ಸಂಖ್ಯೆಯನ್ನು ಇಲ್ಲಿ ಲೆಕ್ಕಕ್ಕೇ ತೆಗೆದುಕೊಂಡಿಲ್ಲ.

ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ಮಾಪಕ. ಈ ಚಿತ್ರದ ಮೂಲಕ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಚಿತ್ರ ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದೆ.