ಅಶಿಕಾ ರಂಗನಾಥ್ ನೋಡೋಕೆ ಹಾಲಿನ ಬಣ್ಣದ ಸುಂದರಿ. ಕ್ಯೂಟ್. ಅಂತಹ ಹುಡುಗಿ ಮದಗಜದಲ್ಲಿ ಸ್ವಲ್ಪ ಕಪ್ಪಾಗಿ ಕಾಣ್ತಾರೆ. ಹಳ್ಳಿ ಹುಡುಗಿ. ರೈತರ ಮನೆಯ ಮಗಳಾಗಿ ನಟಿಸಿರೋ ಅಶಿಕಾಗೆ ಈ ಚಿತ್ರದಲ್ಲಿ ಬೇರೆಯದ್ದೇ ಮಾದರಿಯ ಪಾತ್ರವಿದೆ. ನನಗೆ ಗದ್ದದೆ ಕೆಲಸ ಮಾಡೋದು ಗೊತ್ತರಲಿಲ್ಲ. ಗದ್ದೆಯಲ್ಲಿ ಒಂದೆರಡು ದಿನ ಕೆಲಸ ಮಾಡಿ ಕಲಿತುಕೊಂಡೆ. ಸೈಕಲ್ ಹೊಡೆಯೋದು.. ಅದರಲ್ಲೂ ಗಂಡಸರ ಸೈಕಲ್ ಹೊಡೆಯೋದು ಗೊತ್ತಿರಲಿಲ್ಲ. ಅವೆಲ್ಲವನ್ನೂ ಕಲಿತೆ. ಆದರೆ, ಚಿತ್ರದಲ್ಲಿ ಧಮ್ ಹೊಡೆಯೋ ಸೀನ್ ಇದೆ. ಅದಂತೂ ಸಿಕ್ಕಾಪಟ್ಟೆ ಕಷ್ಟವಾಯ್ತು ಎಂದಿದ್ದಾರೆ ಅಶಿಕಾ.
ಅಂದಹಾಗೆ ಅಶಿಕಾಗೆ ಈ ಧಮ್ ಹೊಡೆಯೋದನ್ನು ಹೇಳಿಕೊಟ್ಟೋರು ಹೀರೋ ಶ್ರೀಮುರಳಿಯಂತೆ. ಅವರು ಸಿನಿಮಾದಲ್ಲಿ ಧಮ್ ಹೊಡೆದೂ ಪ್ರಾಕ್ಟೀಸ್ ಇರುತ್ತೆ. ಅದನ್ನವರು ನನಗಿಲ್ಲಿ ಹೇಳಿಕೊಟ್ಟರು ಎಂದಿದ್ದಾರೆ ಮದಗಜನ ಸುಂದರಿ. ಮದಗಜ ಇದೇ ಡಿಸೆಂಬರ್ 3ರಂದು ರಿಲೀಸ್ ಆಗುತ್ತಿದೆ. ಅಯೋಗ್ಯ ಮಹೇಶ್ ನಿರ್ದೇಶನದ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಂತೂ ಇವೆ. ದೊಡ್ಟ ಮಟ್ಟದಲ್ಲಿ ರಿಲೀಸ್ ಆಗುತ್ತಿರೋ ಅದ್ಧೂರಿ ಚಿತ್ರದ ಹಿಂದಿರೋದು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ. ಅಶಿಕಾರ ಲುಕ್ಕು ಡಿಫರೆಂಟ್ ಆಗಿದೆ. ಕಥೆಯೂ ಹಾಗೆಯೇ ಇದೆ ಅನ್ನೋ ಕಾನ್ಫಿಡೆನ್ಸ್ ಅಶಿಕಾ ಮಾತುಗಳಲ್ಲಿದೆ.