ಮದಗಜ. ರೋರಿಂಗ್ ಸ್ಟಾರ್ ಶ್ರೀಮುರಳಿ, ಅಶಿಕಾ ರಂಗನಾಥ್, ಜಗಪತಿ ಬಾಬು, ದೇವಯಾನಿ ನಟಿಸಿರೋ ಸಿನಿಮಾ. ಚಿತ್ರದ ಟೈಟಲ್ ಮಾಸ್. ಆದರೆ ಕಥೆ ಕ್ಲಾಸ್ ಎಂದಿದ್ದಾರೆ ಶ್ರೀಮುರಳಿ. ಚಿತ್ರದಲ್ಲಿ ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಎರಡೂ ಹದವಾಗಿ ಬೆರೆತಿದೆ ಎನ್ನುತ್ತಿರೋದು ನಿರ್ದೇಶಕ ಮಹೇಶ್ ಕುಮಾರ್. ಚಿತ್ರದ ಮೇಕಿಂಗ್ ಕೂಡಾ ಅದ್ಭುತವಾಗಿ ಮೂಡಿಬಂದಿದೆ. ಅದ್ಧೂರಿತನವೂ ಇದೆ. ಕಲಾವಿದರು, ತಂತ್ರಜ್ಞರು, ನಿರ್ದೇಶಕರ ಜೊತೆಗೆ ಈ ಚಿತ್ರದ ಬಗ್ಗೆ ನಿರ್ಮಾಪಕರೂ ಫುಲ್ ಖುಷಿಯಾಗಿದ್ದಾರೆ.
ಚಿತ್ರ ಎರಡೂವರೆ ಗಂಟೆ ಇದೆ. ಒಂದೇ ಒಂದು ಸೀನ್ ಕೂಡಾ ಬೋರ್ ಹೊಡೆಸಲ್ಲ. ಕಂಪ್ಲೀಟ್ ಮನರಂಜನೆ ಇದೆ ಎನ್ನುತ್ತಾರೆ ಉಮಾಪತಿ ಶ್ರೀನಿವಾಸ ಗೌಡ. ತಾಯಿಯನ್ನು ಪ್ರೀತಿಸುವ ಮಕ್ಕಳು, ಮಕ್ಕಳನ್ನು ಪ್ರೀತಿಸುವ ತಾಯಂದಿರಿಗೆ ಇಷ್ಟವಾಗೋ ಸಿನಿಮಾ ಇದು. ಪಕ್ಕಾ ಫ್ಯಾಮಿಲಿ ಮೂವಿ ಎನ್ನುವುದು ಉಮಾಪತಿಯವರ ಮಾತು.
ನಿರ್ಮಾಪಕರಾದವರಿಗೆ ಪ್ರೇಕ್ಷಕರ ಪಲ್ಸ್ ಅರ್ಥವಾಗಬೇಕು. ಅವರು ಎಂತಹ ಕಥೆ ಬಯಸುತ್ತಾರೆ ಎನ್ನುವುದು ಗೊತ್ತಿರಬೇಕು. ಅದನ್ನು ಮಾಸ್ ಚಿತ್ರಗಳ ಮೂಲಕವೇ ನೀಡಬೇಕು ಅನ್ನೋದು ನನ್ನ ಪಾಲಿಸಿ. ಅದಕ್ಕೆ ತಕ್ಕಂತೆಯೇ ಮದಗಜ ಬಂದಿದೆ. ಚಿತ್ರದ ಸೂಪರ್ ಹಿಟ್ ಆಗಲಿದೆ ಎಂದಿದ್ದಾರೆ ಉಮಾಪತಿ ಶ್ರೀನಿವಾಸ ಗೌಡ