ಮದಗಜ. ಟ್ರೇಲರ್ ನೋಡಿದವರಿಗೆ ಇದು ಪಕ್ಕಾ ಆ್ಯಕ್ಷನ್ ಎಂಟರ್‍ಟೈನರ್ ಎನಿಸುತ್ತದೆ. ಆದರೆ, ಶ್ರೀಮುರಳಿ ಹೇಳೋದೇ ಬೇರೆ. ಪ್ರೇಕ್ಷಕರು ನನ್ನನ್ನು ಉಗ್ರಂ, ಮಫ್ತಿ, ರಥಾವರ ಚಿತ್ರಗಳಲ್ಲಿ ನೋಡಿದಕ್ಕಿಂತ ಬೇರೆಯದೇ ಆದ ಶೇಡ್‍ಗಳಿವೆ. ಇದು ನನ್ನ ಫ್ಯಾನ್ಸ್ ಮತ್ತು ಅಮ್ಮಂದಿರಿಗೆ ಇಷ್ಟವಾಗೋ ಸಿನಿಮಾ ಎನ್ನುತ್ತಾರೆ ಶ್ರೀಮುರಳಿ.
ಜಗಪತಿ ಬಾಬು, ರಂಗಾಯಣ ರಘು, ದೇವಯಾನಿ ಅವರ ಪಾತ್ರಗಳು ಇಡೀ ಚಿತ್ರವನ್ನು ಬೇರೆಯದೇ ಆದ ರೀತಿಯಲ್ಲಿ ಕಟ್ಟಿಕೊಡುತ್ತವೆ. ಅಶಿಕಾ ರಂಗನಾಥ್ ಅವರ ನಟನೆ ಚಿತ್ರದ ಇನ್ನೊಂದು ಪ್ಲಸ್. ನಿರ್ದೇಶಕ ಮಹೇಶ್ ಇಡೀ ಚಿತ್ರವನ್ನು ಕಟ್ಟಿಕೊಟ್ಟಿರುವ ರೀತಿಯೇ ಚೆನ್ನಾಗಿದೆ. ಖಂಡಿತಾ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ ಶ್ರೀಮುರಳಿ.
ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಮದಗಜ, ಇದೇ ಡಿಸೆಂಬರ್ 3ರಂದು ರಿಲೀಸ್ ಆಗುತ್ತಿದೆ. ಒಂದೆಡೆ ಒಕ್ಕಲಿಗರ ಸಂಘದ ಚುನಾವಣೆಗೆ ನಿಂತಿದ್ದರೂ, ಮದಗಜ ಚಿತ್ರದ ಪಬ್ಲಿಸಿಟಿ ಮತ್ತು ಸಿದ್ಧತೆಯನ್ನೂ ಅಷ್ಟೇ ಚೆನ್ನಾಗಿ ನಿರ್ವಹಿಸುತ್ತಿರೋದು ಉಮಾಪತಿ ಶ್ರೀನಿವಾಸಗೌಡ ಅವರ ಪ್ರೊಫೆಷನಲಿಸಂಗೆ ಸಾಕ್ಷಿ.