ಪಾರ್ಲೆಜಿ ಬಿಸ್ಕೆಟ್ ಪ್ಯಾಕು.. ದಿನಸಿ ಅಂಗಡಿ.. ತರಕಾರಿ ಅಂಗಡಿ.. ಮಟನ್ ಅಂಗಡಿ.. ಗ್ಯಾರೇಜು.. ಆಟೋ.. ಎಳನೀರು ಗಾಡಿ.. ಸ್ಕೂಲ್ ಮಕ್ಕಳ ಬ್ಯಾಗು, ಸ್ಲೇಟು.. ಎಲ್ಲ.. ಎಲ್ಲ ಬಡವ ರ್ಯಾಸ್ಕಲ್ ಮಯ.
ಡಾಲಿ ಧನಂಜಯ್ ಅಭಿನಯದ ಹೊಸ ಸಿನಿಮಾ ಬಡವ ರ್ಯಾಸ್ಕಲ್. ರಿಲೀಸ್ ಆಗೋಕೆ ರೆಡಿಯಾಗಿರೋ ಚಿತ್ರಕ್ಕೆ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಾಪಕಿ. ಶಂಕರ್ ಗುರು ನಿರ್ದೇಶನದ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿ. ರಂಗಾಯಣ ರಘು, ಸ್ಪರ್ಶ ರೇಖಾ, ತಾರಾ ಮೊದಲಾದವರು ನಟಿಸಿರೋ ಬಡವ ರ್ಯಾಸ್ಕಲ್ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ರತ್ನನ್ ಪ್ರಪಂಚ ಚಿತ್ರದ ಮೂಲಕ ಒಟಿಟಿಯಲ್ಲಿ ಹೆಸರು ಮಾಡಿದ್ದ ಧನಂಜಯ್, ಈ ಬಾರಿ ಥಿಯೇಟರಿಗೇ ಬರುತ್ತಿದ್ದಾರೆ.