ಆರ್ಆರ್ಆರ್. ಜನವರಿಗೆ ರಿಲೀಸ್ ಆಗುತ್ತಿರುವ ಪ್ಯಾನ್ ಇಂಡಿಯಾ ಮೂವಿ. ರಾಜಮೌಳಿ, ಎನ್ಟಿಆರ್ ಮತ್ತು ರಾಮ್ಚರಣ್ ತೇಜ ಕಾಂಬಿನೇಷನ್ ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಕೂಡಾ ಇದ್ದಾರೆ. ಅಂತಹ ಚಿತ್ರದ ಆತ್ಮದಂತಿರುವ ಹಾಡನ್ನು ರಾಜಮೌಳಿ ಕನ್ನಡದಲ್ಲಿಯೂ ರಿಲೀಸ್ ಮಾಡಿದ್ದಾರೆ. ಬೆಂಗಳೂರಿನಲ್ಲಿ.
ಆರ್ಆರ್ಆರ್ ಕನ್ನಡದಲ್ಲಿ ಬರುತ್ತಿದೆ. ಈ ಹಿಂದೆ ಬಾಹುಬಲಿಯನ್ನು ಕನ್ನಡದಲ್ಲಿ ರಿಲೀಸ್ ಮಾಡೋಕೆ ಆಗಲಿಲ್ಲ, ಕ್ಷಮಿಸಿ ಎಂದ ರಾಜಮೌಳಿ, ಆರ್ಆರ್ಆರ್ ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿದ್ದಾರೆ. ನನಗೆ ಅಷ್ಟೊಂದು ಒಳ್ಳೆಯ ಕನ್ನಡ ಬರಲ್ಲ. ಕ್ಷಮಿಸಿ ಎನ್ನುತ್ತಲೇ ಮಾತು ಶುರು ಮಾಡಿದ ರಾಜಮೌಳಿ, ಜನನಿ ಹಾಡನ್ನು ಆರ್ಆರ್ಆರ್ ಚಿತ್ರದ ಆತ್ಮ ಎಂದೇ ಕರೆದರು.
ಜನನಿ.. ಇದು ಕೇವಲ ಹಾಡಲ್ಲ. ಆರ್ಆರ್ಆರ್ ಚಿತ್ರದ ಆತ್ಮಗೀತೆ. ಇದನ್ನು ಕೇಳಿ ಅಲ್ಲ, ನೋಡಿಯೇ ಅನುಭವಿಸಬೇಕು ಎಂದರು.
ಡಿಸೆಂಬರ್ ಮೊದಲ ವಾರ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದ್ದು, ಮುಂದಿನ ತಿಂಗಳು ಇಡೀ ಚಿತ್ರತಂಡ ಬೆಂಗಳೂರಿಗೆ ಬರಲಿದೆಯಂತೆ. ಆಗ ಎಲ್ಲರಿಗೂ ಸಂದರ್ಶನ ನೀಡುತ್ತೇವೆ. ಈಗ ಕ್ಷಮಿಸಿ ಎಂದು ಇನ್ನೊಮ್ಮೆ ಕ್ಷಮೆ ಕೇಳಿದರು ರಾಜಮೌಳಿ.