Print 
biju shivanand,

User Rating: 0 / 5

Star inactiveStar inactiveStar inactiveStar inactiveStar inactive
 
ಒಂದೇ ವೇದಿಕೆ..6 ಸಿನಿಮಾ ಘೋಷಣೆ : ಹೊಸ ಸಾಹಸ
ಒಂದೇ ವೇದಿಕೆ..6 ಸಿನಿಮಾ ಘೋಷಣೆ : ಹೊಸ ಸಾಹಸ

ಸಿನಿಮಾ ನಂ.1 : ಸ್ತಂಭಂ

ಸಿನಿಮಾ ನಂ.2 : ಸಮರ್ಥ್

ಸಿನಿಮಾ ನಂ.3 : ಮಂಗಳೂರು

ಸಿನಿಮಾ ನಂ. 4 : ಫೆಬ್ರವರಿ 29 ಸೂರ್ಯಗಿರಿ

ಸಿನಿಮಾ ನಂ.5 & 6 : ಚಿತ್ರಗಳಿಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ.

ಹೀಗೆ ಒಂದೇ ವೇದಿಕೆಯಲ್ಲಿ ಒಟ್ಟೊಟ್ಟಿಗೇ 6 ಚಿತ್ರಗಳನ್ನು ಘೋಷಿಸಿದ್ದು ಡೆಕ್ಕನ್ ಕಿಂಗ್ ಸಂಸ್ಥೆಯ ಬಿಜು ಶಿವಾನಂದ್.

ಸ್ತಂಭದಲ್ಲಿ ಕೆಜಿಎಫ್ ಖ್ಯಾತಿಯ ಗರುಡರಾಮ್ ಪ್ರಮುಖ ಪಾತ್ರದಲ್ಲಿದ್ದರೆ, ಆಲಿಯಾ ಮತ್ತು ರಕ್ಷಿತ್ ಅನ್ನೋ ಹೊಸ ಪ್ರತಿಭೆಗಳಿಗೆ ನಾಯಕ ನಾಯಕಿ ಪಾತ್ರ.

ಸಮರ್ಥ್ ಚಿತ್ರ ತಮಿಳಿನಲ್ಲಿ ವೇದಾದ್ರಿ ಅನ್ನೋ ಹೆಸರಿನಲ್ಲಿ ಈಗಾಗಲೇ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಪ್ರವೀರ್ ಶೆಟ್ಟಿ ಮತ್ತು ಸೋನಲ್ ಮಂಥೆರೋ ಲೀಡ್ ರೋಲ್‍ಗಳಲ್ಲಿದ್ದಾರೆ. ರಾಜಾ ವೆಂಕಯ್ಯ ಡೈರೆಕ್ಟರ್.

ಮಂಗಳೂರು ಚಿತ್ರಕ್ಕೆ ಸಂದೀಪ್ ಮಲಾನಿ ನಿರ್ದೇಶಕ. ಕಲಾವಿದರ ಆಯ್ಕೆ ಆಗಿಲ್ಲ. ಇದು ಕನ್ನಡದಲ್ಲಷ್ಟೇ ತುಳು, ಬ್ಯಾರಿ ಭಾಷೆಗಳಲ್ಲೂ ನಿರ್ಮಾಣವಾಗಲಿರುವ ಸಿನಿಮಾ.

ಫೆಬ್ರವರಿ 29 ಸೂರ್ಯಗಿರಿ ಕೂಡಾ ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಲಿರೋ ಸಿನಿಮಾ.