` ರಾಷ್ಟ್ರಪ್ರಶಸ್ತಿ ವಿಜೇತ ಅಕ್ಷಿ ಡಿ.3ಕ್ಕೆ ರಿಲೀಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಾಷ್ಟ್ರಪ್ರಶಸ್ತಿ ವಿಜೇತ ಅಕ್ಷಿ ಡಿ.3ಕ್ಕೆ ರಿಲೀಸ್
Akshi Movie Image

ಬಹುತೇಕ ಪ್ರಶಸ್ತಿ ವಿಜೇತ ಚಿತ್ರಗಳು ಪ್ರಶಸ್ತಿ ಬಂದಾಗಷ್ಟೇ ಗೊತ್ತಾಗುತ್ತವೆ. ಕೆಲವು ಚಿತ್ರಗಳು ಮಾತ್ರ ಪ್ರೇಕ್ಷಕರಿಗೆ ತಲುಪುತ್ತವೆ. ರಾಷ್ಟ್ರಪ್ರಶಸ್ತಿ ವಿಜೇತ ಅಕ್ಷಿ ಚಿತ್ರವನ್ನು ನಿರ್ಮಾಪಕ ಜಾಕ್ ಮಂಜು ಪ್ರೇಕ್ಷಕರಿಗೆ ತಲುಪಿಸಲು ಮುಂದಡಿಯಿಟ್ಟಿದ್ದಾರೆ. ಅಕ್ಷಿ ಚಿತ್ರ ಡಿಸೆಂಬರ್ 3ರಂದು ರಿಲೀಸ್ ಆಗುತ್ತಿದೆ.

ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಚಿತ್ರ ಅಕ್ಷಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತ್ತು. ನಿರ್ದೇಶಕ ಮನೋಜ್ ಕುಮಾರ್ ಅವರ ಪ್ರಯತ್ನಕ್ಕೆ ಶ್ಲಾಘನೆ ಸಿಕ್ಕಿತ್ತು. ಚಿತ್ರದ ಆಡಿಯೋ ರೈಟ್ಸ್‍ನ್ನು ಪುನೀತ್ ರಾಜ್‍ಕುಮಾರ್ ಅವರು ಖರೀದಿಸಿದ್ದರು. ಚಿತ್ರವನ್ನು ನೋಡೋಕೆ ಇಷ್ಟಪಟ್ಟಿದ್ದರು. ಹೀಗಾಗಿ ಅವರಿಗಾಗಿ ಒಂದು ಪ್ರೈವೇಟ್ ಲಿಂಕ್ ಸಿದ್ಧ ಮಾಡಿ ಕಳಿಸಿದ್ದರಂತೆ ಮನೋಜ್. ಆದರೆ, ಈಗ ಪುನೀತ್ ಇಲ್ಲ. ಕಣ್ಣೊಂದು ಹೇಳಿತು ಬದುಕಲು ಬಿಡಿ ನನ್ನನ್ನು.. ಎಂಬ ಹಾಡನ್ನು ಪುನೀತ್ ಅವರಿಗೇ ಅರ್ಪಿಸಿದ್ದೇವೆ ಎಂದಿದ್ದಾರೆ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್.

ವಿತರಕ ಜಾಕ್ ಮಂಜು ಅವರೇ ಚಿತ್ರವನ್ನು ರಾಜ್ಯಾದ್ಯಂತ ರಿಲೀಸ್ ಮಾಡುತ್ತಿದ್ದಾರೆ. ಚಿತ್ರವನ್ನು ನೋಡಿದ ಜಾಕ್ ಮಂಜು ಅವರ ಮಗ ಕೂಡಾ ನೇತ್ರದಾನಕ್ಕೆ ಮುಂದಾಗಿರುವುದು ವಿಶೇಷ. ಚಿತ್ರವನ್ನು ನೋಡುವಾಗ ಪದೇ ಪದೇ ಅಣ್ಣಾವ್ರೇ ನೆನಪಾಗುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ ಜಾಕ್ ಮಂಜು.